Kornersite

Crime Just In Karnataka State

ಹಾಲಶ್ರೀ ಸ್ವಾಮೀಯ ಮತ್ತೊಂದು ಮುಖವಾಡ ಬಯಲು; ಮತ್ತೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ದೋಖಾ!

ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ಚೈತ್ರಾ ಕುಂದಾಪುರ ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಶ್ರೀಯ ಮತ್ತೊಂದು ಇಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸೆ. 19ರಂದು ಈ ದೂರು ದಾಖಲಾಗಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರುನಲ್ಲಿ ಪಿಡಿಒ ಸಂಜಯ್ ಚವಡಾಳ ಎಂಬುವವರು ಈ ದೂರು ಸಲ್ಲಿಸಿದ್ದಾರೆ. 2023 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಾಗಿ ಹಾಲಶ್ರೀ ಸ್ವಾಮೀಜಿಗಳನ್ನು ನಾನು ಸಂಪರ್ಕಿಸಿದ್ದೆ. ಟಿಕೆಟ್ ಗಾಗಿ ಅವರು 1 ಕೋಟಿ ರೂ. ಪಡೆದಿದ್ದರು.ಮೂರು ಹಂತಗಳಲ್ಲಿ 1 ಕೋಟಿ ರೂ.ಗಳಷ್ಟು ಹಣವನ್ನು ಹಾಲಶ್ರೀ ಸ್ವಾಮೀಜಿಯವರಿಗೆ ತಲುಪಿಸಿದ್ದಾಗಿ ಸಂಜಯ್ ಆರೋಪಿಸಿದ್ದಾರೆ.

ದೂರಿಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ನೀಡುವಂತೆ ಪೊಲೀಸರು ಕೇಳಿದ್ದು ಆ ದಾಖಲೆಗಳನ್ನು ಇಷ್ಟು ದಿನವಾದರೂ ಸಂಜಯ್ ಕೊಟ್ಟಿಲ್ಲ. ಹಾಗಾಗಿ, ಅವರ ದೂರನ್ನು ಅಪೀಲಿನ ಮಾದರಿಯಲ್ಲಿ ಇರಿಸಲಾಗಿದೆ. ದಾಖಲೆ ನೋಡಿಕೊಂಡು ಎಫ್ ಐಆರ್ ದಾಖಲಿಸುವುದಾಗಿ ಪೊಲೀಸರ ತಿಳಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ