Kornersite

International Just In

ಸಾವು ತಂದ ಗೂಗಲ್ ಮ್ಯಾಪ್! ಮುಂದೇನಾಯ್ತು?

ಇತ್ತೀಚೆಗೆ ಪ್ರತಿಯೊಬ್ಬರು ಮನುಷ್ಯರಿಗಿಂತಲೂ ತಂತ್ರಜ್ಞಾನವನ್ನೇ ಹೆಚ್ಚಾಗಿ ನಂಬುತ್ತಿದ್ದಾರೆ. ಎಲ್ಲಿಗೆ ಹೋಗಬೇಕಾದರೂ ಸರಿ ರಸ್ತೆ ಗೊತ್ತಿಲ್ಲವೆಂದರೆ ಸಾಕು, ಗೂಗಲ್ ಮ್ಯಾಪ್ ಹಾಕಿಕೊಂಡು ಆರಾಮಾಗಿ ಹೋಗುತ್ತೇವೆ ಎನ್ನುತ್ತಾರೆ. ಆದರೆ, ಗೂಗಲ್ ಮ್ಯಾಪ್ ನಂಬಿಕೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರ ಕೆರೊಲಿನಾದಲ್ಲಿ ವ್ಯಕ್ತಿಯೊಬ್ಬ ಗೂಗಲ್ ಮ್ಯಾಪ್ ಸಹಕಾರದೊಂದಿಗೆ ತೆರಳಿ ಸಾವನ್ನಪ್ಪಿದ್ದಾನೆ. ಹೀಗಾಗಿ ಆ ಕುಟುಂಬಸ್ಥರು ಗೂಗಲ್ ಮ್ಯಾಪ್ ಮೇಲೆ ದೂರು ದಾಖಲಿಸಿದ್ದಾರೆ. ಈ ಆಪ್‌ ಕುಸಿದ ಸೇತುವೆ ಮೇಲೆ ಸಂಚಾರ ಮಾಡಲು ನಿರ್ದೇಶಿಸಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ವೈದ್ಯಕೀಯ ಡಿವೈಸ್‌ ಗಳ ಮಾರಾಟಗಾರ ಮತ್ತು ಯುಎಸ್ ನೌಕಾಪಡೆಯ ಅನುಭವಿ ಫಿಲಿಪ್ ಪ್ಯಾಕ್ಸನ್ ಸಾವನ್ನಪ್ಪಿದ ವ್ಯಕ್ತಿ. ಮಳೆ ಬರುತ್ತಿದ್ದ ಸಮಯದಲ್ಲಿ ರಾತ್ರಿ ತನ್ನ ಮಗಳ ಒಂಬತ್ತನೇ ಹುಟ್ಟುಹಬ್ಬದ ಪಾರ್ಟಿಯಿಂದ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಎರಡು ಮಕ್ಕಳ ತಂದೆಯಾಗಿರುವ ಫಿಲಿಪ್ ಪ್ಯಾಕ್ಸನ್ ತನ್ನ ಮಗಳ ವಿಶೇಷ ದಿನವನ್ನು ಸ್ನೇಹಿತರ ಮನೆಯಲ್ಲಿ ಆಚರಿಸಿದ್ದರು. ಈ ಸಮಾರಂಭದ ನಂತರ ಫಿಲಿಪ್ ಎಲ್ಲರನ್ನೂ ಮನೆಗೆ ಕಳುಹಿಸಿ, ಪಾರ್ಟಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಜೋಡಿಸುವ ಹಾಗೂ ಸ್ಥಳವನ್ನು ಸ್ವಚ್ಛ ಮಾಡುವ ಕೆಲಸ ಮಾಡಲು ಉಳಿದುಕೊಂಡಿದ್ದರು. ಈ ಕೆಲಸ ಆದ ಮೇಲೆ ಮರಳಿ ಮನೆಗೆ ತೆರಳಲು ಫಿಲಿಪ್ ಪ್ಯಾಕ್ಸನ್ ಮುಂದಾಗಿದ್ದರು. ಆಗ ಅವರ ಗೂಗಲ್ ಮ್ಯಾಪ್ ಬಳಕೆ ಮಾಡಿದ್ದರು. ಈ ಗೂಗಲ್‌ ಮ್ಯಾಪ್‌ ತೋರಿದ ಮಾರ್ಗ ಅವರ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ