ಸಿದ್ದು ಉಡುಪು ಹಾಗು ಜವಳಿ ಉತ್ಪನ್ನಗಳಲ್ಲಿ ಹೆಸರುವಾಸಿಯಾಗಿರುವ ದೇಶದ ಹೆಮ್ಮೆಯ ಸಂಸ್ಥೆಯಾಗಿರುವ ಅರವಿಂದ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ 17ನೇ ಮಳಿಗೆ ಆರಂಭಿಸಿದೆ.
ಉನ್ನತ ದರ್ಜೆಯ ಸಿದ್ದ ಉಡುಪುಗಳ ರೀಟೇಲ್ ಮಾರಟದ ಈ ನೂತನ ಮಳಿಗೆಯನ್ನು ಬೆಂಗಳೂರಿನ ಜಯನಗರದಲ್ಲಿ ಆರಂಭಿಸಿದೆ. ಇದು ಬೆಂಗಳೂರಿನಲ್ಲಿ ದಿ ಅರವಿಂದ್ ಸ್ಟೋರ್ ನ 17 ನೇ ಕೇಂದ್ರವಾಗಿದೆ. ಈ ಮಳಿಗೆಯಲ್ಲಿ ಅರವಿಂದ್ ಲಿಮಿಟೆಡ್ ತಯಾರಿಸುವ ಬಟ್ಟೆಗಳು, ಸಿದ್ದ ಉಡುಪುಗಳು ಹಾಗೂ ವಿವಿಧ ಮಾಧರಿಯ ಪ್ರಖ್ಯಾತ ಕಂಪನಿಗಳ ಸಿದ್ದ ಉಡುಪುಗಳನ್ನು ಮಾರಾಟಮಾಡಲಾಗುವುದು.
ಅಲ್ಲದೆ ತನ್ನ ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ಉಡುಪುಗಳನ್ನು ಸಿದ್ದಪಡಿಸಿ ನೀಡುವ ಸೇವೆಯನ್ನು ಸಹ ಕೇಂದ್ರದಲ್ಲಿ ಪ್ರಾರಂಭಿಸಿದೆ. ನೂತನ ಮಳಿಗೆಯನ್ನು ಅರವಿಂದ್ ಲಿಮಿಟೆಡ್ ನ ನಿರ್ದೇಶಕರಾದ ಕುಲಿನ್ ಲಾಲ್ಬಾಯ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಲವರು ಇದ್ದರು.