ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಭಾರತದ ವನಿತಾ ಪಡೆ ಮತ್ತೊಂದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಮೂವರು ಹೆಣ್ಣು ಮಕ್ಕಳ ಪಿಸ್ತೂಲಿನಿಂದ ಹಾರಿದ ಗುಂಡುಗಳು ದೇಶದ ಪದಕಗಳ ಬುಟ್ಟಿಗೆ ಚಿನ್ನದ ಪದಕ ಹಾಕಿವೆ. ಶೂಟಿಂಗ್ ನಲ್ಲಿ ಪ್ರಾಭಲ್ಯ ಮುಂದುವರೆಸಿರುವ ಭಾರತದ ಕ್ರೀಡಾಪಟುಗಳು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ (25m Pistol Team Event) ಚಿನ್ನ ಗೆದ್ದಿದ್ದಾರೆ.
ಭಾರತದ ಮನು, ಇಶಾ ಮತ್ತು ರಿದಮ್ (Manu Bhaker, Esha Singh and Rhythm Sangwan) ಅವರು 25 ಮೀಟರ್ ಪಿಸ್ತೂಲ್ ಟೀಮ್ ಇವೆಂಟ್ ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಭಾರತದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಒಟ್ಟಾಗಿ 1790 ಅಂಕಗಳನ್ನು ಗಳಿಸಿದರು. ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಭಾರತದ ಮೂವರಲ್ಲಿ ಮನು ಭಾಕರ್ ಅತ್ಯಧಿಕ 590 ಅಂಕಗಳನ್ನು ಗಳಿಸಿದರು. 25 ಮೀಟರ್ ಪಿಸ್ತೂಲ್ ಟೀಮ್ ಈವೆಂಟ್ ನಲ್ಲಿ ಚಿನ್ನ ಗೆಲ್ಲುವುದಕ್ಕೂ ಮುನ್ನಭಾರತೀಯ ಮಹಿಳೆಯರು 50 ಮೀಟರ್ ರೈಫಲ್ 3 ಸ್ಥಾನಗಳ ಶೂಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.