Kornersite

Just In National

ಹೀಗೆ ಮಾಡಿದರೆ ಪತಿ-ಪತ್ನಿ ತಿಂಗಳಿಗೆ 10 ಸಾವಿರ ಪಿಂಚಣಿ ಸಿಗುತ್ತದೆ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸುತ್ತಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲು ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ವಯಸ್ಸಾದ ನಂತರ ಯಾರ ಮೇಲೆಯೂ ಅವಲಂಬನೆಯಾಗುವುದನ್ನು ತಪ್ಪಿಸಲು ಈ ಯೋಜನೆ ಪರಿಚಯಿಸಲಾಗುತ್ತಿದೆ.

ಅರುಮ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಅಟಲ್ ಪಿಂಚಣಿ ಯೋಜನೆ ಜಾರಿಗೆ ತಂದಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಉದ್ಘಾಟಿಸಿದ್ದರು. 60 ವರ್ಷ ವಯಸ್ಸಾದ ನಂತರ, ಮಾಸಿಕ ಪಿಂಚಣಿ ಅಡಿಯಲ್ಲಿ ನಿರ್ದಿಷ್ಟ ಮೊತ್ತ ಪಡೆಯಬಹುದು. ಈ ಯೋಜನೆಡಯಿ ಪತಿ ಹಾಗೂ ಪತ್ನಿ ಇಬ್ಬರೂ ಸೇರಬಹುದು.

60 ವರ್ಷ ವಯಸ್ಸಾದ ನಂತರ ತಿಂಗಳಿಗೆ 1 ಸಾವಿರ ರಿಂದ 5 ಸಾವಿರ ರೂ.ಗಳ ಗ್ಯಾರಂಟಿ ಇದಕ್ಕೆ ಇದೆ. ಗಂಡ ಹಾಗೂ ಹೆಂಡತಿ ಇಬ್ಬರೂ ಇದರಲ್ಲಿ ಸೇರಬಹುದು. ತಿಂಗಳಿಗೆ 5 ಸಾವಿರ ರೂ. ಪ್ರೀಮಿಯಂ ಪಾವತಿಸಿದರೆ ಉತ್ತಮ. ಇದರ ಪರಿಣಾಮವಾಗಿ ನೀವು ನಂತರದ ವಯಸ್ಸಿನಲ್ಲಿ ತಲಾ 5 ಸಾವಿರ ರೂ.ಗಳ ದರದಲ್ಲಿ 10 ಸಾವಿರ ರೂ.ಗಳನ್ನು ಪಡೆಯಬಹುದು. 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ 42 ರೂ. ಪಾವತಿಸಬೇಕಾಗುತ್ತದೆ. ವಯಸ್ಸಾದಂತೆ ಪ್ರೀಮಿಯಂ ಹೆಚ್ಚಾಗುತ್ತದೆ. 40ನೇ ವಯಸ್ಸಿನಲ್ಲಿ ಸೇರಿದರೆ 210 ರೂ. ಪಾವತಿಸಬೇಕಾಗುತ್ತದೆ. ಬ್ಯಾಂಕ್ ಖಾತೆಯಿಂದ ಸ್ವಯಂ ಡೆಬಿಟ್ ಮೂಲಕ ಮೊತ್ತ ಪಾವತಿಸಬೇಹುದು. ಮೂರು, ಆರು, ವರ್ಷಕ್ಕೊಮ್ಮೆ ಪ್ರೀಮಿಯಂ ಪಾವತಿಸಬಹುದು. ಹತ್ತಿರದ ಸಾರ್ವಜನಿಕ ವಲಯದ ಬ್ಯಾಂಕಿಗೆ ಹೋಗಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನೀಡುವ ಮೂಲಕ ಅರ್ಜಿ ಪೂರ್ಣಗೊಳಿಸುವ ಮೂಲಕ ಅಟಲ್ ಪಿಂಚಣಿ ಯೋಜನೆ ಖಾತೆ ತೆರೆಯಬಹುದು.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ