Kornersite

Just In Sports

ಭಾರತದ ಸ್ವಾಗತಕ್ಕೆ ಪಾಕ್ ಕ್ರಿಕೆಟಿಗರು ಫುಲ್ ಖುಷಿ!

ಏಕದಿನ ವಿಶ್ವಕಪ್‌ ಗಾಗಿ (World Cup 2023) ಪಾಕ್ ಕ್ರಿಕೆಟ್ ತಂಡ ಹೈದರಾಬಾದ್ ತಲುಪಿದ್ದು, 15 ದಿನಗಳ ಕಾಲ ಅಲ್ಲಿಯೇ ಇರಲಿದೆ. ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದ್ದು, ನಿನ್ನೆ ಪಾಕ್ ತಂಡ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಿದೆ.

ಬುಧವಾರ ಸಂಜೆ, ನಾಯಕ ಬಾಬರ್ ಆಝಂ (Babar Azam) ನೇತೃತ್ವದ ಪಾಕಿಸ್ತಾನಿ ತಂಡವು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭವ್ಯ ಸ್ವಾಗತ ಕೋರಿದ್ದು, ಸ್ವತಃ ಪಾಕ್ ಆಟಗಾರರೇ ಮೂಕ ವಿಸ್ಮಿತರಾಗಿದ್ದಾರೆ. ಭಾರತದ ಈ ಆತಿಥ್ಯಕ್ಕೆ ಮಾರು ಹೋಗಿರುವ ಪಾಕ್ ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾರತದ ಸ್ವಾಗತವನ್ನು ಕೊಂಡಾಡಿದ್ದಾರೆ.

ಏಳು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಬಂದಿದ್ದು, ಇದಕ್ಕೂ ಮುನ್ನ 2016ರ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನ ತಂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಹಲವರು ಕ್ರಿಕೆಟಿಗರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಎಲ್ಲಾ ಆಟಗಾರರನ್ನು ತಂಡದ ಹೋಟೆಲ್‌ನಲ್ಲಿ ಭಾರತೀಯ ಶೈಲಿಯಲ್ಲಿ ಸ್ವಾಗತಿಸಲಾಯಿತು. ಅಲ್ಲದೆ ಈ ಸಂದರ್ಭದಲ್ಲಿ ಆಟಗಾರರಿಗೆ ಕೇಸರಿ ಬಣ್ಣದ ಶಾಲುಗಳನ್ನು ಹೋದಿಸಿ ಸ್ವಾಗತಿಸಲಾಯಿತು. ನಾಯಕ ಬಾಬರ್ ಆಝಂ ಸೇರಿದಂತೆ ಹಲವು ಆಟಗಾರರು ಕೇಸರಿ ಶಾಲು ಧರಿಸಿರುವ ವಿಡಿಯೋ ವೈರಲ್ ಆಗಿವೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್