ಕಾಮುಕನೊಬ್ಬ ಯುವತಿಯನ್ನು ಹಿಂಬಾಲಿಸಿ ಮುತ್ತಿಟ್ಟು ಪರಾರಿಯಾಗುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಮುಕನನ್ನು (Amorous) ಹೈಗ್ರೌಂಡ್ ಪೊಲೀಸರು (High Ground Police) ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಆರೋಪಿಯು, ಅಂತಾರಾಜ್ಯದ ಯುವತಿಯೊಬ್ಬರ ಹಿಂದೆ ಬಿದ್ದಿದ್ದ. ವಸಂತ ನಗರ ಪಿಜಿಯಲ್ಲಿದ್ದ ಯುವತಿ ಎಂಬಿಎ ಓದುತ್ತಿದ್ದರು. ಇವರು ನಿತ್ಯ ನಡೆದುಕೊಂಡು ಪಿಜಿಯಿಂದ ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಆರೋಪಿ ಹಿಂಬದಿಗೆ ಹೊಡೆದು, ತಬ್ಬಿಕೊಂಡು ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ. ಆರೋಪಿಯ ಕಿರುಕುಳ (Harassment) ತಾಳಲಾರದೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಯುವತಿಯನ್ನು ಪ್ರೀತಿ ಮಾಡುವ ಉದ್ದೇಶದಿಂದ ನಿತ್ಯ ಹಿಂದೆ ಹೋಗಿ ಇಂಪ್ರೆಸ್ ಮಾಡುವುದಕ್ಕೆ ಈ ರೀತಿ ಮಾಡುತ್ತಿದ್ದ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.