ಉತ್ತರ ಪ್ರದೇಶದ ಅಯೋಧ್ಯೆಯ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಬಟ್ಟೆ ತೆಗೆದು ಖಾಸಗಿ ಅಂಗಗಳನ್ನು ಸ್ಪರ್ಶಿಸಿದ ಪಾಪಿ ಪ್ರಾಂಶುಪಾಲನನ್ನು ಬಂಧಿಸಲಾಗಿದೆ.
ಈ ಪಾಪಿ ಪ್ರಾಂಶುಪಾಲ ಅದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯೊಂದಿಗೆ ನಾಚಿಗೇಡಿನ ಕೃತ್ಯ ಎಸಗಿದ್ದಾನೆ. ಘಟನೆಯ ನಂತರ ಬಾಲಕಿ ಭಯಭೀತಳಾಗಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಳು ಎನ್ನಲಾಗಿದೆ. ಈ ಘಟನೆ ಸೆ. 16ರಂದು ನಡೆದಿದೆ.
ಶಾಲೆ ಬಿಟ್ಟ ನಂತರ ಆರೋಪಿ ಪ್ರಾಂಶುಪಾಲ ರಿಜ್ವಾನ್ ಅಹ್ಮದ್ ಆಕೆಯನ್ನು ತಡೆದು ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾನೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎಲ್ಲರೂ ಶಾಲೆಯಿಂದ ಹೊರ ಹೋಗುತ್ತಿದ್ದಂತೆ ಬಾಲಕಿಯನ್ನು ಬಲವಂತವಾಗಿ ತರಗತಿಯೊಳಗೆ ಕರೆದೊಯ್ದು ಒಳಗಿನಿಂದ ಬಾಗಿಲು ಹಾಕಿ, ಬಟ್ಟೆ ತೆಗೆಯುವಂತೆ ಒತ್ತಾಯಿಸಿದ್ದಾನೆ. ನಂತರ ಆಕೆಯ ಅಂಗಗಳನ್ನು ಮುಟ್ಟಿದ್ದಾನೆ. ಘಟನೆಯ ನಂತರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಬಾಲಕಿ ಹೆದರಿದ್ದಾಳೆ. ಆನಂತರ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾಳೆ. ನಂತರ ಪೋಷಕರು ಶಾಲೆಗೆ ಹೋಗಲು ಒತ್ತಾಯಿಸಿದಾಗ ಘಟನೆಯ ಕುರಿತು ವಿವರಿಸಿದ್ದಾಳೆ. ನಂತರ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.