Kornersite

Just In National

ಯುವ ಭಾರತ ಇನ್ನು ಮುಂದೆ ವೃದ್ಧ ಭಾರತ!?

ದೇಶದ ಯುವಸಮೂಹದ ಸಂಖ್ಯೆ ಮುಂದಿನ 13 ವರ್ಷದೊಳಗೆ ಕಡಿಮೆಯಾಗಲಿದ್ದು, 2036ರ ಅವಧಿಗೆ ವೃದ್ಧರ ಪಾಲು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯೂತ್ ಇನ್ ಇಂಡಿಯಾ 2022ರ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದ್ದು, 2021ರಿಂದಲೇ ಯುವ ಜನಸಂಖ್ಯೆಯ ಪಾಲು ಕಡಿಮೆಯಾಗಲು ಆರಂಭಿಸಲಿದೆ ಎಂಬ ಆತಂಕಕ್ಕೆ ದಾರಿ ಮಾಡಿದೆ. ಯುವ ಸಮೂಹವು 1991ರಲ್ಲಿ 222.7 ಮಿಲಿಯನ್ನಿಂದ 2011ರಲ್ಲಿ 333.4 ಮಿಲಿಯನ್ಗೆ ಏರಿಕೆ ಕಂಡಿತ್ತು. 2021ರ ವೇಳೆಗೆ 371.4 ಮಿಲಿಯನ್ಗೆ ತಲುಪಿ, 2036ರ ವೇಳೆಗೆ 345.5 ಮಿಲಿಯನ್ಗೆ ಇಳಿಯುವ ಸಾಧ್ಯತೆ ಎನ್ನಲಾಗುತ್ತಿದೆ.

20ರಿಂದ 40 ವರ್ಷದೊಳಗಿನ ಯುವಕರು ಅಕಾಲಿಕ ಮರಣ ಹೊಂದುತ್ತಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶಗಳಲ್ಲಿ ಯುವಕರಿಗಿಂತ ವಯಸ್ಸಾದವರ ಜನಸಂಖ್ಯೆ ಮುಂದಿನ 13 ವರ್ಷದೊಳಗೆ ಹೆಚ್ಚಾಗಿ ಕಾಣುವ ಸಾಧ್ಯತೆ ಇದೆ. ಹೆಚ್ಚು ಯುವಸಮೂಹ ಹೊಂದಿರುವ ಬಿಹಾರ, ಉತ್ತರ ಪ್ರದೇಶದಲ್ಲಿ 2021ರವರೆಗೆ ಯುವ ಜನಸಂಖ್ಯೆಯ ಅನುಪಾತದಲ್ಲಿ ಏರಿಕೆ ಕಂಡರೂ ಕ್ಷೀಣಿಸುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತಿದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ