ಮಂಗಳೂರು: ಖ್ಯಾತ ಉದ್ಯಮಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಹೇಶ್ ಬಸ್ ಟ್ರಾವೆಲ್ಸ್ ಮಾಲೀಕರಾಗಿರುವ ಉದ್ಯಮಿ (Businessman) ಪ್ರಕಾಶ್ ಶೇಖ್ (43) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. 60 ಬಸ್ ಗಳನ್ನು ಹೊಂದಿರುವ ಪ್ರಕಾಶ್ ಶೇಖ್ ಮಂಗಳೂರಿನ (Mangaluru) ಕದ್ರಿಯ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕಾಶ್ ಶೇಖ್ ಖಾಸಗಿ ಬಸ್ ಹಾಗೂ ಟೂರಿಸ್ಟ್ ಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಇವರ ಬಸ್ ಗಳಿಗೆ ಮಂಗಳೂರು ಹಾಗೂ ಉಡುಪಿಯಲ್ಲಿ ಉತ್ತಮ ಹೆಸರಿತ್ತು. ಆದರೆ, ಸದ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.