ಏಷ್ಯನ್ ಗೇಮ್ಸ್ ನ 9 ದಿನವಾದ ಇಂದು ಆರಂಭದಲ್ಲಿ ಭಾರತಕ್ಕೆ ಮೂರು ಕಂಚು ಬಂದಿವೆ. ಭಾರತೀಯ ರೋಲರ್ ಸ್ಕೇಟರ್ ಗಳ ಪುರುಷ ಮತ್ತು ಮಹಿಳೆಯರ 3 ಸಾವಿರ ಮೀಟರ್ ತಂಡ ರೀಲೆ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದಾರೆ. ಟೆಬಲ್ ಟೆನ್ನಿಸ್ ನಲ್ಲಿ ಒಂದು ಕಂಚು ಬಂದಿದೆ.
ಸ್ಪೀಡ್ ಸ್ಕೇಟಿಂಗ್ 3 ಸಾವಿರ ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಗಳಾದ ಆರತಿ ಕಸ್ತೂರಿರಾಜ್, ಹೀರಾಲ್, ಸಂಜನಾ ಬತುಲಾ ಹಾಗೂ ಕಾರ್ತಿಕಾ ಜಗದೀಶ್ವರನ್ ಅವರಿದ್ದ ಮಹಿಳಾ ತಂಡವು ಕಂಚಿನ ಪದಕ ಗಳಿಸಿತು. ಈ ತಂಡ 4.34.861 ಸೆಕೆಂಡ್ ಗಳೊಂದಿಗೆ ಗುರಿ ಮುಟ್ಟಿತು. ಚೈನೀಸ್ ತೈಪೆ, ದಕ್ಷಿಣ ಕೊರಿಯಿ ಚಿನ್ನ ಹಾಗೂ ಬೆಳ್ಳಿ ಗೆದ್ದವು.
ಆರ್ಯನ್ ಪಾಲ್ ಸಿಂಗ್ ಘುಮಾನ್, ಆನಂದಕುಮಾರ್ ವೆಲ್ ಕುಮಾರ್, ಸಿದ್ಧಾಂತ ಕಾಂಬ್ಳೆ, ವಿಕ್ರಮ್ ಇಂಗಳೆ ಅವರ ಪುರುಷರ ತಂಡ ರೀಲೆಯಲ್ಲಿ 4.19.128 ಸೆಕೆಂಡ್ ಗಳೊಂದಿಗೆ ಗುರಿ ಮುಟ್ಟಿ ಮತ್ತೊಂದು ಕಂಚು ಗೆದ್ದರು. ಚೈನೀಸ್ ತೈಪೆ, ದಕ್ಷಿಣಾ ಕೊರೆಯಾ ಮೊದಲೆರಡು ಸ್ಥಾನ ಗಳಿಸಿದವು. 2010 ರ ಏಷ್ಯನ್ ಗೇಮ್ಸ್ ನಲ್ಲಿ ಕೂಡ ಪುರುಷರ ಸ್ಕೇಟಿಂಗ್ ಹಾಗೂ ಜೋಡಿ ಸ್ಕೇಟಿಂಗ್ ನಲ್ಲಿ ಎರಡು ಕಂಚಿನ ಪದಕವನ್ನು ಭಾರತೀಯರು ಗೆದ್ದಿದ್ದರು.
ಟೆಬಲ್ ಟೆನ್ನಿಸ್ ನ ಕಂಚಿನ ಪಂದ್ಯದ ಹೋರಾಟದಲ್ಲಿ ಭಾರತೀಯ ಆಟಗಾರರಾದ ಸುತೀರ್ಥಾ ಮುಖರ್ಜಿ ಕಂಚು ಗೆದ್ದಿದ್ದಾರೆ.
ಇಂದಿನಿಂದ ಏಷ್ಯನ್ ನಲ್ಲಿ ಕಬಡ್ಡಿ ಅಭಿಯಾನ ಮುಂದುವರೆಯಲಿದೆ. ಬ್ಯಾಟ್ಮಿಂಟನ್ ಆಟಗಾರರು ಕೂಡ ಸವಾಲು ಎದುರಿಸಲಿದ್ದಾರೆ. ನಿನ್ನೆ ಒಂದೇ ದಿನ ಭಾರತೀಯ ಆಟಗಾರರು 15 ಪದಕ ಗೆದ್ದ ಸಾಧನೆ ಮಾಡಿದ್ದರು.