Kornersite

Just In Karnataka Politics State

‘ಸಹುಕಾರ್’ ಗೆ ಗೋಕಾಕ್ ನಲ್ಲೇ ಟಕ್ಕರ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

Belagavi : ಶಾಸಕ ರಮೇಶ ಜಾರಕಿಹೊಳಿ(Ramesh Jarakiholi)ಗೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್(Laxmi Hebbalkar) ನಡುವಿನ ವಾಕ್ಸಮರ ಮುಂದುವರೆದಿದ್ದು, ತಿರುಗೇಟು ನೀಡಿದ್ದಾರೆ.
ಬೆಳಗಾವಿಯ (Belagavi) ಜಿಲ್ಲೆಯಲ್ಲಿ ಗೋಕಾಕ್ ಲಿಂಗಾಯತರ ಹಿಡಿತದಲ್ಲಿ ಇರುವ ಮತ ಕ್ಷೇತ್ರ. ಅಲ್ಲಿ ಪಂಚಮಸಾಲಿ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಈಗ ಅದೇ ಸಮುದಾಯದ ಅಭ್ಯರ್ಥಿಯನ್ನು ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಣಕ್ಕಿಳಿಸಿದ್ದಾರೆ. ತಾಲೂಕಿನ ಪ್ರಖ್ಯಾತ ವೈದ್ಯ ಡಾ.ಮಹಾಂತೇಶ ಕಡಾಡಿಗೆ ಅವರಿಗೆ ಕಾಂಗ್ರೆಸ್ (Congress) ಟಿಕೆಟ್ ಸಿಗುವಲ್ಲಿ ಹೆಬ್ಬಾಳ್ಕರ್ ಮಹತ್ವದ ಪಾತ್ರ ವಹಿಸಿದ್ದಾರೆ.


ಟಿಕೆಟ್ ವಿಚಾರಕ್ಕಾಗಿ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ಎದುರು ಹಠ ಸಾಧಿಸಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ವಿರುದ್ಧದ ಮರಾಠಾ ಅಸ್ತ್ರ್ರಕ್ಕೆ ಪ್ರತಿಯಾಗಿ ಪಂಚಮಸಾಲಿ ಅಸ್ತ್ರ ಉಪಯೋಗಿಸಿದ್ದಾರೆ. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅಶೋಕ್ ಪೂಜಾರಿ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ಕ್ಷೇತ್ರದ ಪಂಚಮಸಾಲಿ ಮುಖಂಡರು ತಮ್ಮದೇ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು.


ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 2,47,000 ಇದೆ. ಅದರಲ್ಲಿ ಲಿಂಗಾಯತ ಮತದಾರರು 90 ಸಾವಿರ ಇದ್ದಾರೆ. ಇದರಲ್ಲಿ 75 ಸಾವಿರದಷ್ಟು ಪಂಚಮಸಾಲಿ ಸಮಾಜದ ಮತಗಳಿವೆ. 50 ಸಾವಿರದಷ್ಟು ಎಸ್ಸಿ- ಎಸ್ಟಿ ಸಮುದಾಯದ ಮತಗಳಿದ್ದು ಮುಸ್ಲಿಂ ಸಮುದಾಯ 30 ಸಾವಿರ, ಕುರಬ ಸಮುದಾಯ 25ಸಾವಿರ, ಉಪ್ಪಾರ ಸಮುದಾಯ 20 ಸಾವಿರ ಮತದಾರರಿದ್ದಾರೆ. ಮರಾಠಾ ಸಮುದಾಯದ 10 ಸಾವಿರ ಮತಗಳು ಸೇರಿದಂತೆ ಇನ್ನಿತರ ಸಮುದಾಯದ 25 ಸಾವಿರ ಮತದಾರರು ಇದ್ದಾರೆ.


ಇತ್ತೀಚೆಗೆ ಇಬ್ಬರ ಮಧ್ಯೆ ವಾಕ್ಸಮರ, ತಂತ್ರ- ಪ್ರತಿತಂತ್ರ ಮುಂದುವರೆದಿತ್ತು. ಹೀಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮರಾಠಾ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಮರಾಠಾ ಸಮುದಾಯದ ತನ್ನ ಆಪ್ತ ನಾಗೇಶ್ ಮನ್ನೋಲ್ಕರ್‌ಗೆ ಬಿಜೆಪಿ (BJP) ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆ. ತನ್ನ ಸೋಲಿಸಲು ತಂತ್ರ ಹೆಣೆದಿದ್ದ ರಮೇಶ್ ಅವರಿಗೆ, ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿತಂತ್ರ ಹೆಣೆದಿದ್ದಾರೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು