Kornersite

Bengaluru Just In Karnataka State

(Karnataka Assembly Election)ಉಮಾಶ್ರೀಗೆ ಟಿಕೆಟ್ ನೀಡಬಾರದೆಂದು ಫೀಲ್ಡ್ ಗೆ ಇಳಿದ ಸ್ವಾಮೀಜಿಗಳು!

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಣರಂಗ ರಂಗೇರಿದೆ. ಕಾಂಗ್ರೆಸ್ ಪಕ್ಷವು ಈಗಾಗಲೇ ತನ್ನ ಮೊದಲ ಹಾಗೂ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದರೆ, ಜೆಡಿಎಸ್ ಕೂಡ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇನ್ನೂ ಬಿಜೆಪಿ ಅಳೆದು- ತೂಗಿ ಪಟ್ಟಿ ಬಿಡುಗಡೆ ಮಾಡುವ ತಂತ್ರ ಹೆಣೆಯುತ್ತಿದೆ. ಈ ಮಧ್ಯೆ ಟಿಕೆಟ್ ಗಾಗಿ ಆಕಾಂಕ್ಷಿತರು ಏನೆಲ್ಲ ಕಸರತ್ತು ನಡೆಸಿದ್ದಾರೆ. ಆದರೆ, ಇಲ್ಲಿ ಟಿಕೆಟ್ ಕೊಡಬಾರದು ಎಂದು ಸ್ವಾಮೀಜಿಗಳೇ ಫೀಲ್ಡ್ ಗೆ ಇಳಿದಿದ್ದಾರೆ.


ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ದಿನಾಂಕಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿಯಿದ್ದರೂ ರಾಜಕೀಯ ಪಕ್ಷಗಳು ಶೇ.100 ರಷ್ಟು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಹಾಗೂ ಎರಡನೇ ಪಟ್ಟಿಯಲ್ಲಿ 42 ಜನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿತ್ತು. ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರು ಹಾಗೂ ಕ್ಷೇತ್ರಕ್ಕೆ ಒಬ್ಬರೇ ಆಕಾಂಕ್ಷಿತರಿರುವ ಕ್ಷೇತ್ರಗಳ ಹೆಸರನ್ನು ಬಿಡಗಡೆ ಮಾಡಲಾಗಿತ್ತು.

ಆದರೆ, ಎರಡನೇ ಪಟ್ಟಿಯಲ್ಲಿ ಸ್ವಲ್ಪ ಮಟ್ಟಿಗೆ ಕ್ಲಿಷ್ಟಕರ ಇದ್ದ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಆದರೂ ಆಕಾಂಕ್ಷಿತರು ಟಿಕೆಟ್ ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹಲವರು ಈಗಾಗಲೇ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಟಿಕೆಟ್ ಗಾಗಿ ಹಲವರು ನಾಯಕರ ಮನವೊಲಿಕೆಗಾಗಿ ಹಲವಾರು ತಂತ್ರಗಳನ್ನು ಅಭ್ಯರ್ಥಿಗಳು ಅನುಸರಿಸಿದ್ದರು. ಆದರೆ, ಇಲ್ಲಿ ತೇರದಾಳ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಟಿಕೆಟ್ ನೀಡಬಾರದು ಎಂದು ಸ್ವಾಮೀಜಿಗಳೇ ಫೀಲ್ಡ್ ಗೆ ಇಳಿದಿದ್ದಾರೆ.

ತೇರದಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವೆ ಉಮಾಶ್ರೀಗೆ ಕಾಂಗ್ರೆಸ್‌ ಟಿಕೆಟ್‌ ನೀಡಬಾರದು ಎಂದು ಹಲವು ಮಠಗಳ ಸ್ವಾಮೀಜಿಗಳು ಕಾಂಗ್ರೆಸ್‌ ಹೈಕಮಾಂಡ್‌ಗೆ ಮನವಿ ಮಾಡುತ್ತಿದ್ದಾರೆ. ತೇರದಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬಾರದು ಎಂದು ಅಭಿನವ ರೇವಣ ಸಿದ್ದೇಶ್ವರ ಶ್ರೀ, ಮೃತ್ಯುಂಜಯ‌ಶ್ರೀ, ಪಂಡಿತ ಪಟ್ಟಣ ಶ್ರೀ, ಮಲ್ಲಪ್ಪ ಬಾವಿಕಟ್ಟಿ, ಚಂದ್ರಶೇಖರ ಶಿವಪೂಜಿ ಸ್ವಾಮೀಜಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಗಳಾದ ಡಾ.ಮಲ್ಲೇಶಪ್ಪ ಎಸ್.ದಡ್ಡೆನವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.


ತೇರದಾಳದ ವಿಧಾನಸಭಾ ಕ್ಷೇತ್ರದ್ಲಿ 60 ಸಾವಿರ ಹಟಗಾರ ಲಿಂಗಾಯತ ಮತದಾರರು ಅಂದರೆ, ಲಿಂಗಾಯತ ನೇಕಾರರಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 10 ಲಕ್ಷ ನಮ್ಮ ಸಮಾಜದ ಜನರಿದ್ದಾರೆ. ನಮ್ಮ ಸಮುದಾಯ ಬಹಳ ಹಿಂದಿನಿಂದಲೂ ಕಾಂಗ್ರೆಸ್ ಜೊತೆಗಿದೆ. ಮಲ್ಲೇಶಪ್ಪ ದಡ್ಡೆನವರ ಕುಟುಂಬ ಜೊತೆಗಿದೆ. ಹೀಗಾಗಿ ಡಾ. ಮಲ್ಲೇಶ್ವಪ್ಪ ಅವರಿಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದರೆ ಅವರು ಗೆಲ್ಲುತ್ತಾರೆ. ಉಮಾಶ್ರೀಗೆ ಟಿಕೆಟ್ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಉಮಾಶ್ರೀ ಈಗಾಗಲೇ ಗೆದ್ದು‌ ಸಚಿವರಾಗಿದ್ದಾರೆ. ಈಗ ಯುವಕ ಮಲ್ಲೇಶಪ್ಪಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ನಾಯಕರ ಮೇಲೆ ಶ್ರೀಗಳು ಒತ್ತಾಯ ಹೇರಿದ್ದಾರೆ.

ತೇರದಾಳದಲ್ಲಿ ನಮ್ಮ‌ ಸಮೂದಾಯದವರಿಗೆ ಟಿಕೆಟ್ ನೀಡಬೇಕು. ಮಲ್ಲೇಶಪ್ಪ ಅವರು ವೃತ್ತಿಯಲ್ಲಿ ವೈದ್ಯರು. ಇವರು ಕುಟುಂಬ ಹಿಂದಿನಿಂದಲೂ ಸ್ಥಳೀಯರಿಗೆ ಸಹಾಯ ಮಾಡುತ್ತ ಬರುತ್ತಿದೆ. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸ್ಥಳೀಯ ವೈದ್ಯರಿಗೆ ಟಿಕೆಟ್ ನೀಡಬೇಕು ಎಂದು ಮಠಾಧೀಶರು ಒತ್ತಾಯಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ