Kornersite

Just In Karnataka National

Narendra Modi: ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ!

Mysuru : ದೇಶದಲ್ಲಿ (India) ಸದ್ಯ 3,167 ಹುಲಿಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ನಡೆದ ಹುಲಿ ಯೋಜನೆಯ (Tiger Project) ಸುವರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ನರೇಂದ್ರ ಮೋದಿ (Narendra Modi) 2022ರ ಹುಲಿ ಗಣತಿ ವರದಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಪ್ರಾಜೆಕ್ಟ್ ಟೈಗರ್‌ನ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ. ದೇಶವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸಿದೆ ಮತ್ತು ಮತ್ತು ಅದೇ ಸಮಯದಲ್ಲಿ, ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ.75 ರಷ್ಟು ಭಾರತದಲ್ಲಿದೆ ಎಂದು ಹೇಳಿದ್ದಾರೆ.

ವಿಶ್ವದ ಭೂ ಪ್ರದೇಶದ ಕೇವಲ ಶೇ.2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತವು ಜಾಗತಿಕ ವೈವಿಧ್ಯತೆಗೆ ಶೇ.8 ರಷ್ಟು ಕೊಡುಗೆ ನೀಡುತ್ತದೆ. ದಶಕಗಳ ಹಿಂದೆ ಭಾರತದಲ್ಲಿ ಚಿತಾಗಳು ಅಳಿದು ಹೋಗಿದ್ದವು. ನಾವು ಈಗ ಚೀತಾವನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದು, ಅವುಗಳ ವಂಶ ವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ದೇಶದಲ್ಲಿ ಒಟ್ಟು 3167 ಹುಲಿಗಳಿವೆ. 2006ರಲ್ಲಿ 1,411 ಇದ್ದರೆ, 2018ರಲ್ಲಿ ಈ ಸಂಖ್ಯೆ 2,967ಕ್ಕೆ ಏರಿಕೆಯಾಗಿದೆ. 30 ಸಾವಿರಕ್ಕೂ ಅಧಿಕ ಏಷ್ಯಾಟಿಕ್ ಆನೆಗಳಿದ್ದರೆ, ಒಂದು ಕೊಂಬಿನ ಘೇಂಡಾಮೃಗ 3 ಸಾವಿರ ಇವೆ. 675 ಸಿಂಹಗಳು ಇವೆ ಎಂದು ಹೇಳಿದ್ದಾರೆ.

2014ರಲ್ಲಿ 2,226 ಹುಲಿಗಳಿದ್ದರೆ 2022ರಲ್ಲಿ ಇದು 3,167ಕ್ಕೆ ಏರಿಕೆಯಾಗಿದೆ. 2014ರಲ್ಲಿ 523 ಸಿಂಹಳಿದ್ದರೆ 2020ರಲ್ಲಿ 674ಕ್ಕೆ ಏರಿಕೆಯಾಗಿದೆ. 2014ರಲ್ಲಿ 7,910 ಚಿರತೆಗಳಿದ್ದರೆ 2018ರಲ್ಲಿ 12,852ಕ್ಕೆ ಏರಿಕೆಯಾಗಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ