Tiruvanantapuram : ಸೆಕ್ಸ್ ಗೆ ಒಪ್ಪದ ಪತ್ನಿ(Wife)ಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ(Kerala) ಎರ್ನಾಕುಲಂನ ಪೆರಿಂತಲ್ಮನ್ನಾ ಎಂಬಲ್ಲಿ ಬೆಳಕಿಗೆ ಬಂದಿದೆ.
ಪತ್ನಿ ಸೆಕ್ಸ್ ಗೆ ಒಪ್ಪದಿದ್ದಕ್ಕೆ ಅಕ್ರಮ ಸಂಬಂಧದ ಅನುಮಾನ ವ್ಯಕ್ತಪಡಿಸಿ ಪಾಪಿ ಪತಿಯು (Husband Killed Wife) ಬರ್ಬರವಾಗಿ ಹತ್ಯೆ ಮಾಡಿದಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ರಫೀಕ್ (35) ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪತ್ನಿ ಫಾತಿಮಾ ಫಹ್ನಾ (30)ಳನ್ನು ಕೊಲೆ ಮಾಡಿದ್ದಾನೆ.

ರಫೀಕ್ ಇತ್ತೀಚೆಗೆ ಪತ್ನಿಯನ್ನು ಬಟ್ಟೆಯಿಂದ ಮೂಗು-ಬಾಯಿ ಕಟ್ಟಿ ಕೊಲೆ ಮಾಡಿದ್ದಾನೆ. ನಾಲ್ಕೂವರೆ ವರ್ಷದ ಮಗು ಜೊತೆ ದಂಪತಿ ಮಲಗಿದ್ದ ಸಂದರ್ಭದಲ್ಲಿ ಪತಿ ಈ ಕೃತ್ಯ ಎಸಗಿದ್ದಾನೆ. ಪತ್ನಿ, ಸೆಕ್ಸ್ ಗೆ ಒಪ್ಪದಿದ್ದರಿಂದ ಆಕ್ರೋಶಗೊಂಡ ಪತ್ತಿ, ರಫೀಕ್ ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇರಬೇಕು ಎಂದು ಶಂಕಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ತಾಯಿ ಕೂಡ ಅದೇ ಮನೆಯಲ್ಲಿದ್ದು, ಅವರು ಪಕ್ಕದ ಕೊಠಡಿಯಲ್ಲಿ ಮಲಗಿದ್ದರು. ಇತ್ತ ರಫೀಕ್ ಮೊದಲು ತನ್ನ ಪತ್ನಿಯ ಕೈ-ಕಾಲುಗಳನ್ನು ಕಿಟಕಿಗೆ ಕಟ್ಟಿದ್ದಾನೆ. ಇದನ್ನು ಗಮನಿಸಿದ ಫಾತಿಮಾ ತಾಯಿ ಜೋರಾಗಿ ಕಿರುಚಿಕೊಂಡು ಸಹಾಯಕ್ಕಾಗಿ ಸುತ್ತಮುತ್ತಲಿನ ಮನೆಯವನ್ನು ಕರೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇತ್ತ ಪತ್ನಿ ಸಾವನ್ನಪ್ಪುತ್ತಿದ್ದೆಂ ರಫೀಕ್, ಪತ್ನಿಯ ಚಿನ್ನಾಭರಣಗಳೊಂದಿಗೆ ತಲೆಮರೆಸಿಕೊಂಡಿದ್ದ. ನಂತರ ಆತನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ.