ಚಂದನವನದ (Sandalwood) ಖ್ಯಾತ ನಟಿ ಅನಿತಾ ಭಟ್ (Anita Bhat) ಸಹೋದರನನ್ನು ಕಳೆದುಕೊಂಡಿದ್ದಾರೆ.

ನಿನ್ನೆ ಅವರ ಸಹೋದರ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ಕುರಿತು ಪೋಸ್ಟ್ ಮಾಡಿರುವ ಅನಿತಾ ಭಟ್ ಭಾವುಕರಾಗಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಸೈಕೋ, ಕನ್ನೇರಿ, ಬೆಂಗಳೂರು 69 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್, ನಿನ್ನೆ ನನ್ನ ಹೃದಯ ತುಂಡಾಗಿದೆ. ನನ್ನ ಸಹೋದರ ಹೃದಯ ಸ್ತಂಭನದಿಂದ (Cardiac Arrest) ನಮ್ಮನ್ನು ಅಗಲಿದ್ದಾರೆ. ನಾವು ಅನುಭವಿಸುತ್ತಿರುವ ನೋವು ಯಾವುದೇ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾನು ಒಪ್ಪಿಕೊಳ್ಳಬೇಕಾದ ಕಹಿ ಸತ್ಯವೆಂದರೆ ಅವನು ಎಂದಿಗೂ ಹಿಂತಿರುಗುವುದಿಲ್ಲ. ಆತನಿಗೆ ಸದ್ಗತಿ ಸಿಗುವಂತೆ ಅನುಗ್ರಹಿಸಿ. ಈಗ ನಿಮ್ಮ ಆಶೀರ್ವಾದ ಬೇಕು ಎಂದು ನಟಿ ಪೋಸ್ಟ್ ಮಾಡಿದ್ದಾರೆ.
ನಟಿಯ ಪೋಸ್ಟ್ಗೆ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.