Bangalore: ಸರಿಗಮಪ (Sa Re Ga Ma Pa) ರಿಯಾಲಿಟಿ ಶೋ ಹಲವು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಏಪ್ರಿಲ್ 15 ಹಾಗೂ 16ರಂದು ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ’ ಫಿನಾಲೆ ನಡೆದಿತ್ತು. ಪ್ರಗತಿ ಬಡಿಗೇರ್ ಅವರು ಈ ಟೈಟಲ್ ಗೆದ್ದಿದ್ದಾರೆ. ಅವರಿಗೆ ಒಂದು ಸೈಟ್ ಹಾಗೂ ನಗದು ಬಹುಮಾನ ಸಿಕ್ಕಿದೆ. ಫಿನಾಲೇ ರೇಸ್ ನಲ್ಲಿದ್ದ ಶಿವಾನಿ (Shivani) ಅವರು ಮೊದಲ ರನ್ನರ್ ಅಪ್ ಆದರೆ, ಮಂಗಳೂರಿನ ಪ್ರತಿಭೆ ತನುಶ್ರೀ ಎರಡನೇ ರನ್ನರ್ ಅಪ್ ಆಗಿದ್ದಾರೆ.

ಈ ಬಾರಿಯ ‘ಸರಿಗಮಪ’ ಫಿನಾಲೆ ಕೊಪ್ಪಳದಲ್ಲಿ ನಡೆದಿದೆ. ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮೊದಲಾದವರು ಜಡ್ಜ್ ಸ್ಥಾನದಲ್ಲಿದ್ದರು. ಅಂತಿಮ ಹಂತದಲ್ಲಿ ಪ್ರಗತಿ, ಶಿವಾನಿ ಹಾಗೂ ತನುಶ್ರೀ ಇದ್ದರು. ಇದರಲ್ಲಿ ಪ್ರಗತಿ ಗೆದ್ದು ಬೀಗಿದ್ದಾರೆ.

ವಿನ್ನರ್ ಆದ ಪ್ರಗತಿ ಬಡಿಗೇರ್ ಗೆ ನೆಲಮಂಗಲ ಪ್ರಾಜೆಕ್ಟ್ ನಲ್ಲಿ 30-40 ಅಡಿಯ ಸೈಟ್ ಸಿಕ್ಕಿದೆ. 21 ಲಕ್ಷ ರೂಪಾಯಿ ಇದರ ಮೌಲ್ಯ. ಇದರ ಜೊತೆ 4 ಲಕ್ಷ ರೂಪಾಯಿ ನಗದು ದೊರೆತಿದೆ. ಮೊದಲ ರನ್ನರ್ ಅಪ್ ಶಿವಾನಿಗೆ 20 ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿದೆ. ಎರಡನೇ ರನ್ನರ್ ಅಪ್ ತನುಶ್ರೀಗೆ ಐದು ಲಕ್ಷ ರೂಪಾಯಿ ಎಲೆಕ್ಟ್ರಿಕ್ ವಾಹನ ಹಾಗೂ ಐದು ಲಕ್ಷ ರೂಪಾಯಿ ನಗದು ದೊರೆತಿದೆ.