Gujarat : ದೇಶದಲ್ಲಿ ವಾಸಿಸುವ ಬಹುತೇಕರು ದೇವರು, ಪೂಜೆ, ನಂಬಿಕೆಯ ಮೇಲೆಯೇ ಜೀವನ ಸಾಗಿಸುತ್ತಾರೆ. ದೈವತಾ ಆರಾಧನೆ ಭಾರತೀಯರ ಮೊದಲ ಆದ್ಯತೆ. ಆದರೆ, ಇಲ್ಲೊಂದು ಮಧ್ಯ ವಯಸ್ಕ ದಂಪತಿಗಳು ಅತಿಯಾದ ದೈವಿ ಭಕ್ತಿಯಿಂದ ತಮ್ಮ ತಲೆಯನ್ನು ತಾವೇ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ ಭಯಾನಕ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಹೇಮುಭಾಯ್ ಮುಕ್ವಾನಾ(38), ಹನ್ಸಾಬೆನ್(35) ಎಂಬ ದಂಪತಿ ದೇವರ ಮೇಲೆ ಅಪಾರವಾದ ಭಕ್ತಿ ಹೊಂದಿದ್ದರು. ಅವರು ತಲೆ ಕತ್ತರಿಸಿಕೊಳ್ಳುವ ಮೂಲಕ ದೇವರಿಗೆ ಅರ್ಪಿಸಿದ್ದಾರೆ. ಇದಕ್ಕಾಗಿ ದಂಪತಿಗಳು ಮನೆಯಲ್ಲಿಯೇ ರುಂಡವನ್ನು ಕತ್ತರಿಸುವ ಯಂತ್ರವನ್ನು ಸಿದ್ಧಪಡಿಸಿದ್ದರು ಎನ್ನಲಾಗಿದೆ.
ಈ ದಂಪತಿಗಳು ಅಸುನೀಗಿದ ಸ್ಥಳದಲ್ಲಿ ಮರಣ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ತಮ್ಮ ವೃದ್ಧ ತಂದೃ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕುಟುಂಬ ಸದಸ್ಯರನ್ನು ಕೇಳಿಕೊಂಡಿದ್ದಾರೆ.