Gadag : ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ (Anil Menasinakai) ಕಾರಿನ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆಸಿದ್ದಾರೆ. ಅನಿಲ್ ಮೆಣಸಿನಕಾಯಿ ಅವರು ಗದಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ನಾಮಪತ್ರ (Nomination) ಸಲ್ಲಿಸಿ ಹೊರ ಬರುತ್ತಿದ್ದ ಸಂದರ್ಭದಲ್ಲಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ರೋಡ್ ಶೋ ಮೂಲಕ H.K. ಪಾಟೀಲ್ ಕೂಡ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಜೊತೆಗೆ ಮಾತಿನ ಚಕಮಕಿ ಉಂಟಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಗದಗ ಪೊಲೀಸರು ಪರದಾಟ ನಡೆಸಿದರು.
ಗದಗ ಕ್ಷೇತ್ರಕ್ಕೆ ಶಾಸಕ ಹೆಚ್. ಕೆ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ರಿಟರ್ನಿಂಗ್ ಆಫಿಸರ್ ಅನ್ನಪೂರ್ಣ ಅವರಿಗೆ ಹೆಚ್.ಕೆ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ಸಹೋದರ ಡಿ.ಆರ್. ಪಾಟೀಲ್ ಸಾಥ್ ನೀಡಿದರು. ನಾಮಪತ್ರ ಸಲ್ಲಿಸಿದ ಬಳಿಕ ಹೆಚ್.ಕೆ ಪಾಟೀಲ್ ಶಕ್ತಿ ಪ್ರದರ್ಶನ ಮಾಡಿದ್ದು, ಗದಗ ನಗರದ ಕಾಟನ್ ಸೇಲ್ ಸೋಸೈಟಿಯಿಂದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಸಂಪ್ರದಾಯಿಕ ಉಡುಪು ತೊಟ್ಟು ಮೆರವಣಿಗೆಯಲ್ಲಿ ಲಂಬಾಣಿ ಮಹಿಳೆರು ಭಾಗಿಯಾಗಿದ್ದು, ಸಾವಿರು ಕಾರ್ಯಕರ್ತರು ಭಾಗಿ ಆಗಿದ್ದರು.