Kornersite

Bengaluru Just In Karnataka State

Karnataka Assembly Election: ಸಾವಿರ ಕೋಟಿ ರೂ. ಗೂ ಅಧಿಕ ಆಸ್ತಿ ಒಡೆಯ ಡಿಕೆಶಿ!

Bangalore : ಡಿ.ಕೆ. ಶಿವಕುಮಾರ್ ಈಗಾಗಲೇ ಕನಕಪುರ (Kanakapura) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.


ಶಿವಕುಮಾರ್‌ (DK Shivakumar) ತಮ್ಮ ಬಳಿ ಒಟ್ಟು 1,214 ಕೋಟಿ ರೂ. ಮೌಲ್ಯದ ಆಸ್ತಿಯಿದೆ (Assets) ಎಂದು ಘೋಷಿಸಿದ್ದಾರೆ. 2018ರಲ್ಲಿ ಡಿಕೆಶಿ 840 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದರು. ಡಿಕೆಶಿ ಪತ್ನಿಯ ಸ್ಥಿರಾಸ್ತಿ ಹಾಗೂ ಚರಾಸ್ತಿ ಒಟ್ಟು ಮೌಲ್ಯ 153.30ಕೋಟಿ ರೂ. ಇದ್ದು ಇದರಲ್ಲಿ ಅವಿಭಜಿತ ಕುಟುಂಬದ ಬಂದ 61 ಕೋಟಿ ರೂ. ಆಸ್ತಿ ಇದೆ. ಡಿಕೆಶಿ ಬಳಿ ಇರುವ ಚರಾಸ್ತಿ ಮೌಲ್ಯ 244 ಕೋಟಿ ರೂ., ಪತ್ನಿ ಹೆಸರಿನ ಚರಾಸ್ತಿ 20.30 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಚರಾಸ್ತಿ 2.74 ಕೋಟಿ ರೂ. ಇದ್ದು ಮಗನ ಹೆಸರಲ್ಲಿ 1.29 ಲಕ್ಷ ರೂ. ಮಗಳ ಹೆಸರಿಲ್ಲಿ 12 ಲಕ್ಷ ರೂ. ಚರಾಸ್ತಿ ಇದೆ ಎಂದು ಹೇಳಿದ್ದಾರೆ.


ಸ್ಥಿರಾಸ್ತಿ ಒಟ್ಟು ಮೌಲ್ಯ 970 ಕೋಟಿ ರೂ. ಆಗಿದ್ದು ಪತ್ನಿ ಹೆಸರಿನಲ್ಲಿ 113 ಕೋಟಿ ರೂ. ಸ್ಥಿರಾಸ್ತಿ, ಅವಿಭಜಿತ ಕುಟುಂಬದ ಒಟ್ಟು 54.33 ಕೋಟಿ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಜೊತೆಗೆ ಕೃಷಿ, ಬಾಡಿಗೆ ಮತ್ತು ವಿವಿಧ ಕಂಪನಿಗಳಲ್ಲಿ ಶೇರು, ಉದ್ದಿಮೆ ಗಳ ಮೂಲಕ ತಮ್ಮ ಆದಾಯದ ಮೂಲ ಘೋಷಿಸಿದ್ದಾರೆ. 2.184 ಕೆ.ಜಿ ಚಿನ್ನ, 12 ಕೆಜಿ ಬೆಳ್ಳಿ, 2.26 ಕೋಟಿ ರೂ. ಮೌಲ್ಯದ ವಜ್ರ ಹಾಗೂ ಮಾಣಿಕ್ಯದ ಆಭರಣ, 9 ಲಕ್ಷ ರೂ. ಮೌಲ್ಯದ ರೊಲೆಕ್ಸ್ ವಾಚ್, 23 ಲಕ್ಷ ರೂ. ಮೌಲ್ಯದ ಹ್ಯೂಬ್ಲೋಟ್‌ ವಾಚ್‌ ಇದೆ ಎಂದು ಹೇಳಿದ್ದಾರೆ.


ಪತ್ನಿ ಹೆಸರಿನಲ್ಲಿ 2.6 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ, ಕುಟುಂಬದ 1 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ, ಮಗನ ಹೆಸರಿನಲ್ಲಿ 675 ಗ್ರಾಂ ಚಿನ್ನ, ಮಗಳ ಹೆಸರಿನಲ್ಲಿ 675 ಗ್ರಾಂ ಚಿನ್ನ ಹಾಗೂ ಅವಿಭಜಿತ ಕುಟುಂಬದಿಂದ 1.ಕೆಜಿ ಚಿನ್ನ, 10 ಕೆಜಿ ಬೆಳ್ಳಿ ಇದೆ. 226 ಕೋಟಿ ರೂ. ಸಾಲ ಇದ್ದು, ಪತ್ನಿ ಹೆಸರಲ್ಲಿ 34.53 ಕೋಟಿ ರೂ. ಮಗನ ಹೆಸರಲ್ಲಿ 3.81 ಕೋಟಿ ರೂ. ಹಾಗೂ ಮಗಳ ಹೆಸರಿನಲ್ಲಿ 8.25 ಕೋಟಿ ರೂ. ಸಾಲ ಇದೆ ಎಂದು ತೋರಿಸಿದ್ದಾರೆ. ಡಿಕೆಶಿ ವಿರುದ್ಧ ಒಟ್ಟು 19 ಪ್ರಕರಣಗಳಿವೆ. ಡಿಕೆಶಿ ಒಟ್ಟು 14.24 ಕೋಟಿ ರೂ ವಾರ್ಷಿಕ ಆದಾಯ ಹೊಂದಿದ್ದರೆ , ಪತ್ನಿ 1.90 ಕೋಟಿ ರೂ. ವಾರ್ಷಿಕ ಆದಾಯ ಹೊಂದಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ