Bangalore : ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 4ನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸೂಚಿಸಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ಗೆ ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಬಿ ಫಾರಂ ನೀಡಲಾಗಿತ್ತು. ಸಹಜವಾಗಿ 4ನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶೆಟ್ಟರ್ಗೆ ಟಿಕೆಟ್ ನೀಲಾಗಿದೆ.
ಲಿಂಗಸೂಗುರು ಕ್ಷೇತ್ರದಿಂದ ಹಾಲಿ ಶಾಸಕ ದುರ್ಗಪ್ಪ ಎಸ್ ಹುಲಗೇರಿ, ಚಿಕ್ಕಮಗಳೂರು – ಹೆಚ್.ಡಿ ತಮ್ಮಯ್ಯ, ಶ್ರವಣಬೆಳಗೊಳ – ಎಂ.ಎ ಗೋಪಾಲಸ್ವಾಮಿ, ಹರಿಹರ – ನಂದಗವಿ ಶ್ರೀನಿವಾಸ್, ಶಿಗ್ಗಾಂವಿ – ಯೂಸುಫ್ ಸವಣೂರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ದೀಪಕ್ ಚಿಂಚೋರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಲ್ಲದೇ ಇನ್ನೂ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಬೇಕಿದೆ.
ಇನ್ನೂ ಶಿಡ್ಲಘಟ್ಟ, ಮುಳಬಾಗಿಲು, ಮಂಗಳೂರು ಉತ್ತರ, ಪುಲಕೇಶಿನಗರ, ರಾಯಚೂರು, ಅರಕಲಗೂಡು, ಸಿವಿ ರಾಮನ್ ನಗರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿಲ್ಲ.