Bollywood: ಬಾಲಿವುಡ್ ಬಿಗ್ ಬಿ Amitabh bachchan ಮೊಮ್ಮಗಳು ದೆಹಲಿ ಹೈಕೋರ್ಟ್ (Dehli Highcourt) ಮೆಟ್ಟಿಲೇರುವ ಮೂಲಕ ಎಲ್ಲರ ಗಮನ ಸೆಳೆದು ಸುದ್ದಿಯಾಗಿದ್ದಾಳೆ.

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮೊಮ್ಮಗಳು ಹಾಗೂ ಅಭಿಶೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಮಗಳು ಆರಾಧ್ಯ ಒಂದಲ್ಲ ಒಂದು ಕಾರಣಕ್ಕೆ ಟ್ರಾಲಿಗರ ಕಣ್ಣಿಗೆ ಬೀಳ್ತಾನೆ ಇರ್ತಾಳೆ. ಫಂಕ್ಷನ್ ಗಳಲ್ಲಿ, ಪಾರ್ಟಿಗಳಲ್ಲಿ, ಏರ್ ಪೋರ್ಟ್ ನಲ್ಲಿ ತಾಯಿಯ ಕೈ ಹಿಡಿದು ಹೋಗುವ ದೃಶ್ಯ ಸಾಮಾನ್ಯ. ಸೈಲೆಂಟ್ ಆಗಿ ಪಾಪರಾಜಿಗಳಿಗೆ ಸ್ಮೈಲ್ ಕೊಡ್ತಾ ಇರೋದು ನೋಡೇ ಇರ್ತಿವಿ. ಬಟ್ ಇವಾಗ ಆರಾಧ್ಯಾ ಬಚ್ಚನ್ ಹೈಕೋರ್ಟ್ ಮೊರೆ ಹೋಗಿದ್ದು ಎಲ್ಲರಲ್ಲಿಯೂ ಆಶ್ಚರ್ಯ ಮೂಡುವಂತೆ ಮಾಡಿದೆ.

ಆರಾಧ್ಯ ಕೋರ್ಟ್ ಮೊರೆ ಹೋಗಲು ಕಾರಣ ಅವಳ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ. ಹೌದು ಯೂಟ್ಯೂಬ್ ಚಾನೆಲ್ ವೊಂದರ ವಿರುದ್ದ್ ಇದೀಗ ಆರಾಧ್ಯ ಸಮರ ಸಾರಿದ್ದು. ಆ ಒಂದು ಯೂಟ್ಯೂಬ್ ಚಾನೆಲ್ ಆರಾಧ್ಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿತ್ತು. ಹೀಗಾಗಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ಏಪ್ರಿಲ್ 20 ರಂದು ನಡೆಯಲಿದೆ. ಆರಾಧ್ಯ ಕೇವಲ 11 ವರ್ಷದವಳು. ಅಪ್ರಾಪ್ತೆ. ಮಾಧ್ಯಮಗಳು ತನ್ನ್ ಬಗ್ಗೆ ಹಾಗೂ ತನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸುವುದಕ್ಕೆ ತಡೆಯಾಜ್ನೆ ಕೊಡುವಂತೆ ಅರ್ಜಿ ಸಲ್ಲಿಸಿದ್ದಾಳೆ.

ಆರಾಧ್ಯಳನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತೆ. ಸ್ಪೇಷಲಿ ಆಕೆಯ ಲುಕ್ ಗೆ. ಈ ಹಿಂದೆ ಅಭಿಶೇಕ್ ಬಚ್ಚನ್ ಕೋಪ ಕೂಡ ಮಾಡಿಕೊಂಡಿದ್ದರು. ತಮ್ಮ ಮಗಳನ್ನ ಸದಾ ಟ್ರೋಲ್ ಮಾಡ್ತಾ ಇರ್ತಾರೆ ಎಂದು ಗರಂ ಕೂಡ ಆಗಿದ್ದರು. ಸದಾ ನೆಗೆಟಿವ್ ಕಮೆಂಟ್ ನಿಂದ ಬೆಸತ್ತ ಬಚ್ಚನ್ ಕುಟುಂಬ ಇದೀಗ ಕೋರ್ಟ್ ಹೋಗುವುದರ ಮೂಲಕ ಟ್ರೋಲ್ ಮಾಡುವವರಿಗೆ ಸರಿಯಾದ ಉತ್ತರ ಕೊಡಲು ಮುಂದಾಗಿದ್ದಾರೆ.