Sectreat Marriage: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ. ನೋಡಲು ಮುದ್ದು ಮುದ್ದಾಗಿ ಇರೋದಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿ ಬಿಡ್ತಾರೆ. ಇನ್ನು ನಟನೆ ಬಗ್ಗೆ ಹೇಳೋದೇ ಬೇಡ. ಆಲ್ ರೆಡಿ ಎಲ್ಲರೂ ಮೆಚ್ಚಿ ಆಗಿದೆ. ತುಂಬ ಟೈಂ ನಿಂದ ಬೆಳ್ಳಿ ತೆರೆಯಿಂದ ದೂರವಿದ್ದ ಅನುಷ್ಕಾ ಇದೀಗ ಮಹೇಶ್ ಬಾಬು ಅಭಿನಯದ ಮಿಸ್ ಶೆಟ್ತಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೂಲಕ ಮತ್ತೆ ತೆರೆಗೆ ಎಂಟ್ರಿ ಕೊಡಲಿದ್ದಾರೆ.

ಈ ಹಿಂದೆ ಅನೇಕ ನಟರ ಜೊತೆ ಅನುಷ್ಕಾ ಹೆಸರು ತಳಕು ಹಾಕಿಕೊಂಡಿತ್ತು. ಮದುವೆ ಸುದ್ದಿಯೂ ಜೋರಾಗಿಯೇ ಕೇಳಿ ಬಂದಿತ್ತು. ರಿಸೆಂಟ್ ಆಗಿ ಪ್ರಭಾಸ್ ಜೊತೆ ಮದುವೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿತ್ತು. ಮತ್ತೆ ಬ್ರೇಕಪ್ ಅಂತೆ ಎಂದು ಕೆಲವರು ಮಾತನಾಡಲು ಶುರು ಮಾಡಿದ್ರು. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದೆನಪ್ಪಾ ಅದ್ರೆ ಅನುಷ್ಕಾ ಶೆಟ್ಟಿ ಗುಟ್ಟಾಗಿ ಮದುವೆಯಾಗಿದ್ದಾರಂತೆ.

ರಿಸೆಂಟ್ ಆಗಿ ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, ಗುಟ್ಟಾಗಿ ಮದುವೆಯಾಗಿರೋ ಬಗ್ಗೆ ಕೇಳಿದಾಗ ‘ನಾನು ಆಗ್ಗಾಗ ಇಂತಹ ಸುದ್ದಿಗಳನ್ನ ಕೇಳ್ತಾನೇ ಇರ್ತೀನಿ. ಇಂತಹ ಸುದ್ದಿಗಳನ್ನ ಕೇಳಿದಾಗ ತುಂಬಾ ಫನ್ನಿ ಅನ್ನಿಸುತ್ತೆ’ ಅಂತ ಉತ್ತರ ನೀಡಿದ್ದಾರೆ. ಆರಂಭದಲ್ಲಿ ಇಂತಹ ಸುದ್ದಿಗಳಿಂದ ತುಂಬ ಮನಸ್ಸಿಗೆ ನೋವಾಗ್ತಾ ಇತ್ತು. ಅಪ್ಪ ಅಮ್ಮನ ಜೊತೆ ಕೂಡ ಮಾತನಾಡುತ್ತಿದೆ. ಇವಾಗ ಇಂತಹ ಸುದ್ದಿ ಕಿವಿಗೆ ಬಿದ್ದಾಗ ನಗು ಬರುತ್ತೆ.

ಅನುಷ್ಕಾ ಶೆಟ್ಟಿಗೆ ವಯಸ್ಸು 41 ಆದರೂ ಇನ್ನು ಮದುವೆಯಾಗಿಲ್ಲ. ಬ್ಯಾಚುಲರ್ ಆಗಿಯೇ ಇದ್ದಾರೆ. ಅಭಿಮಾನಿಗಳು ಮಾತ್ರ ಅನುಷ್ಕಾ ಮದುವೆಯ ನೋಡೋದಕ್ಕಾಗಿ ಕಾಯ್ತಾ ಇದ್ದಾರೆ.