Hyderabad : ತಂತ್ರಜ್ಞಾನ ಎಷ್ಟೇ ಸುಧಾರಿಸಿದರೂ ಮೂಢನಂಬಿಕೆಗಳ ಹೆಸರಿನಲ್ಲಿ ನರಬಲಿ, ಪ್ರಾಣಿಗಳ ಬಲಿ ಕೊಡುವುದು ಮಾತ್ರ ಇದುವರೆಗೂ ನಿಲ್ಲುತ್ತಿಲ್ಲ. ಅಮವಾಸ್ಯೆ ಹಿನ್ನೆಲೆ ಬಾಲಕನನ್ನು ಬಲಿ ಕೊಡಲಾಗಿದೆ. ಈ ಘಟನೆ ಹೈದರಾಬಾದ್ನ ಸನತ್ನಗರದಲ್ಲಿ ನಡೆದಿದೆ.
ಅಬ್ದುಲ್ ವಾಹಿದ್ (8) ಸಾವನ್ನಪ್ಪಿದ ಬಾಲಕ ಎನ್ನಲಾಗಿದೆ. ಬಾಲಕನನ್ನು ಕೊಲೆ ಮಾಡಿ, ಮೃತ ದೇಹವನ್ನು ಸನತನಗರದ ಅಲ್ಲಾವುದ್ದೀನ್ ಕೋಟಿ ಪ್ರದೇಶದ ಕಾಲುವೆಯಲ್ಲಿ ಎಸೆಯಲಾಗಿದ್ದು, ಅಮವಾಸ್ಯೆ ಇದ್ದ ಕಾರಣ ಬಾಲಕನನ್ನು ಬಲಿ ಕೊಡಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಅಲ್ಲಾದುನ್ ಕೋಟಿಯಲ್ಲಿ ವಾಸಿಂ ಖಾನ್ ಎಂಬ ವ್ಯಕ್ತಿ ಗಾರ್ಮೆಂಟ್ಸ್ ಅಂಗಡಿ ನಡೆಸುತ್ತಿದ್ದ. ಈತ ಚಿಟ್ಸ್ ವ್ಯಾಪಾರ ನಡೆಸುತ್ತಿದ್ದ ಫಿಜಾ ಖಾನ್ ಎಂಬ ಮಂಗಳಮುಖಿಗೆ ಹಣ ನೀಡಿದ್ದ. ಹಣದ ವಿಚಾರವಾಗಿ ವಾಸಿಂ ಖಾನ್ ಮತ್ತು ಫಿಜಾ ಖಾನ್ ನಡುವೆ ಜಗಳವಾಗಿತ್ತು. ಗುರುವಾರ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಆ ದಿನ ಸಂಜೆ ವಾಸಿಂ ಖಾನ್ ಪುತ್ರ ಅಬ್ದುಲ್ ವಾಹಿದ್ ನನ್ನು ನಾಲ್ವರು ಅಪಹರಿಸಿದ್ದರು. ಅವರು ಬಾಲಕನನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಫಿಜಾ ಖಾನ್ ಅವರ ಮನೆಯ ಕಡೆಗೆ ತೆರಳಿದ್ದರು ಎನ್ನಲಿಗದೆ.
ಬಾಲಕನನ್ನು ಕೊಂದು ಜಿಂಕಲವಾಡ ಬಳಿಯ ಕಾಲುವೆಗೆ ಎಸೆದಿದ್ದಾರೆ. ಮೃತ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮತ್ತು ಬಕೆಟ್ನಲ್ಲಿ ತುಂಬಿ ನಾಲಾದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಮಗ ಕಾಣೆಯಾದಾಗ ವಾಸಿಂ ಖಾನ್ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ.