ನಟಿ ಉರ್ವಶಿ ರೌಟೇಲಾ (Urvashi Rautela) ವಿರುದ್ದ ಪತ್ರಕರ್ತ ಸಂಧು ಸುಳ್ಳು ಸುದ್ದಿ ಟ್ವಿಟರ್ (Twitter) ನಲ್ಲಿ ಶೇರ್ ಮಾಡಿದ್ದರು. ಇದಕ್ಕೆ ಕೆಂಡಾಮಂಡಲವಾದ ನಟಿ ಉರ್ವಶಿ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

ಬಹುಭಾಷಾ ನಟಿ ಉರ್ವಶಿ ರೌಟೇಲಾ ಇತ್ತಿಚೆಗೆ ಸಖತ್ ಸುದ್ದಿಯಲ್ಲಿದ್ದರು. ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಉರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎಂದು ಗಾಸಿಪ್ ಹರಿದಾಡುತ್ತಿತ್ತು. ಆದರೆ ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಇದರ ನಡುವೆ ಇಬ್ಬರ ನಡುವೆ ಬ್ರೇಕ್ ಪ್ ಕೂಡ ಆಗಿದೆ ಎಂದು ಹೇಳಲಾಗುತ್ತಿತ್ತು. ಆದರೂ ಉರ್ವಶಿ ಮಾತ್ರ ರಿಷಬ್ ಅವರನ್ನ ಬೆನ್ನುಹತ್ತಿದ್ದರಂತೆ. ರಿಷಬ್ ಅವರು ನನಗೆ ತುಂಬ ಸರಿ ಕಾಲ್ ಮಾಡಿದ್ದರು ಎಂದು ಉರ್ವಶಿ ಹೇಳಿದ್ರೆ, ರಿಷಬ್ ಮಾತ್ರ ‘ಅಕ್ಕ ನನ್ನ ಬಿಟ್ತು ಬಿಡು’ ಎಂದು ಹೇಳಿದ್ದರು.

ಭೀಕರ ಪಘಾತದಲ್ಲಿ ರಿಷಬ್ ಪಂಥ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಉರ್ವಶಿ ಅಲ್ಲಿಯೂ ಬೆನ್ನು ಹತ್ತಿರೋ ಸುದ್ದಿ ಹರದಾಡುತ್ತಿತ್ತು. ರಿಷಬ್ ಬೇಗ ಗುಣಮುಖರಾಗಬೇಕು ಎನ್ನುವ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ‘ಪ್ರಾರ್ಥನೆ’ ಎಂದು ಬರೆದುಕೊಂಡಿದ್ದರು. ಇದು ರಿಷಬ್ ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಇದರಿಂದ ಆಕೆಯನ್ನು ರಿಷಬ್ ಅಭಿಮಾನಿಗಳು ಛೀಮಾರಿ ಹಾಕಿದ್ದರು.

ಆದರೆ ಇದೀಗ ಉರ್ವಶಿ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಕಾರಣ ಅವರ ಬಗ್ಗೆ ಬರೆದ ಸುದ್ದಿ. ಈ ಸುದ್ದಿಯ ಕಾರಣದಿಂದಾಗಿ ನಟಿ ಕೋರ್ಟ್ ನೋಟೀಸ್ ಕೂಡ ಕಳುಹಿಸಿದ್ದಾರೆ. ಅಸಲಿಗೆ ವಿಷಯ ಎನಪ್ಪ ಅಂದ್ರೆ ತಮ್ಮನ್ನು ಚಲನಚಿತ್ರ ವಿಮರ್ಶಕ ಹಾಗೂ ಪರ್ತಕರ್ತ ಎಂದು ಹೇಳಿಕೊಳ್ಲುವ ಉಮರ್ ಸಂಧು ಸದಾ ತಮ್ಮ ಟ್ವಿಟರ್ ಖಾತೆಯಲ್ಲಿ ಸುಳ್ಳು ಸುದ್ದಿಗಳನ್ನು ಹಾಕಿದ್ದಾರೆ. ನಟಿ ಉರ್ವಶಿ ಯೂರೋಪ್ ನಲ್ಲಿ ಏಜೆಂಟ್ ಚಿತ್ರದ ಐಟಂ ಸಾಂಗ್ ಚಿತ್ರೀಕರಣದ ವೇಳೆ ಅಖಿಲ್ ಅಕ್ಕಿನೇನಿ ಬಾಲಿವುಡ್ ನಟಿ ಉರ್ವಶಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಉಮರ್ ಸಂಧು ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ನೋಡಿದ ಉರ್ವಶಿ, ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ನನ್ನ ಲೀಗಲ್ ಟೀಂ ಮಾನನಷ್ಟ ನೋಟೀಸ್ ಕಳುಹಿಸುತ್ತದೆ. ನಿಮ್ಮಂತಹ ಪರ್ತಕರ್ತರ ಕೊಳಕು ಟ್ವಿಟ್ ಗಳಿಂದ ಎಲ್ಲರೂ ಕೋಪಗೊಂಡಿದ್ದಾರೆ ಎಂದು ನಟಿ ಹೇಳಿದ್ದಾರೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ಅವರಂತೆ ವರ್ತಿಸಬೇಡಿ. ಇದರಿಂದ ಬಹಳಷ್ಟು ಮಂದಿಗೆ ನೋವು ಆಗುತ್ತದೆ ಎಂದು ನಟಿ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.