ಕ್ರಿಕೆಟ್ ದೇವರು, ಸಚಿನ್ ತೆಂಡುಲ್ಕರ್ (Sachin Tendulkar) 50 ರ ವಸಂತಕ್ಕೆ ಕಾಲಿಟ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ದಾಖಲೆಯ 100 ಶತಕಗಳನ್ನು ಬಾರಿಸಿರುವ ಸಚಿನ್ ತೆಂಡುಲ್ಕರ್ ಇದೀಗ ಲೈಫ್ ನ ಅರ್ಧ ಶತಕ ಬಾರಿಸಿದ್ದಾರೆ.

ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡುಲ್ಕರ್ 50ನೇ ವಸಂತಕ್ಕೆ ಕಾಲಿಟ್ತಿದ್ದು, ಸಮಾಜಿಕ ಜಾಲತಾಣದಲ್ಲಿ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಸಚಿನ್ ಫೋಟೋವನ್ನು ಹಂಚಿಕೊಂಡು ಶುಭಾಷಯ ತಿಳಿಸುತ್ತಿದ್ದಾರೆ. ಸಚಿನ್, 2013 ರಲ್ಲಿ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಕೊನೆಯ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಭಾವನಾತ್ಮಕ ವಿದಾಯ ತಿಳಿಸಿದ್ದರು.
ಸಚಿನ್ ಹೆಸರಿನಲ್ಲಿರುವ ಪ್ರಶಸ್ತಿಗಳು
ಅರ್ಜುನ್ ಅವಾರ್ಡ್- 1994
ಖೇಲ್ ರತ್ನ್ ಅವಾರ್ಡ್-1997-98
ಪದ್ಮಶ್ರೀ ಅವಾರ್ಡ್-1999
ಪದ್ಮವಿಭೂಷಣ ಅವಾರ್ಡ್-2008
ಭಾರತ ರತ್ನ ಪ್ರಶಸ್ತಿ-2004

ಸಚಿನ್, ಏಕದಿನ ಕ್ರಿಕೆಟ್ ನಲ್ಲಿ ಒಟ್ಟು 463 ಪಂದ್ಯವನ್ನಾಡಿ 18426 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 200 ಪಂದ್ಯಗಳನ್ನಾಡಿ 15921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಹಾಗೂ 68 ಅರ್ಧಶತಕ ಬಾರಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ಹುಟ್ಟುಹಬ್ಬ ಕೋಟ್ಯಾಂತರ ಅಭಿಮಾನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.