ಪಾಪಿಯೊಬ್ಬ ತನ್ನ ಪ್ರೇಯಸಿಯ ಮೇಲೆಯೇ ಕುದಿಯುವ ಎಣ್ಣೆ ಎರಚಿರುವ ಘಟನೆ ನಡೆದಿದೆ.

ಈ ಘಟನೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದಿದ್ದು, ಜವಾಹರ್ ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲೆಯೇ ಕುದಿಯುವ ಎಣ್ಣೆ ಎರಚಲಾಗಿದೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಲೂರು ಜಿಲ್ಲೆಯ ತನ್ನ ಮನೆಯ ಕೊಠಡಿಯಲ್ಲಿ ಯುಕ ಆಕೆಯ ಕೈ ಮತ್ತು ಕಾಲುಗಳ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾನೆ. ಸಂತ್ರಸ್ತೆ ಭಾನುವಾರ ಬೆಳಿಗ್ಗೆ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಮೂರನೇ ವರ್ಷದ ಎಂಜನೀಯರಿಂಗ್ ಓದುತ್ತಿದ್ದಳು. ಏಲೂರು ನಿವಾಸಿಯಾಗಿರುವ ಯುವತಿ ದುಗ್ಗಿರಾಳ ನಿವಾಸಿ ಅನುದೀಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು.

ಆತ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಐದು ದಿನಗಳ ಹಿಂದೆ ಅನುದೀಪ್ ವಿದ್ಯಾರ್ಥಿನಿಯನ್ನು ದುಗ್ಗಿರಾಳದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತ ವಿದ್ಯಾರ್ಥಿನಿಯನ್ನು ಒಂದು ಕೋಣೆಯಲ್ಲಿ ಕಟ್ಟಿ ಹಾಕಿ ಹಿಂಸಿಸುತ್ತಿದ್ದ. ಅಲ್ಲದೇ, ಕೊಲೆ ಬೆದರಿಕೆ ಹಾಕಿದ್ದ. ಮಧ್ಯರಾತ್ರಿಯ ನಂತರ ನೇಣು ಬಿಗಿದು ಕೊಲ್ಲಲು ಯೋಜಿಸಿದ್ದ ಎಂದು ಸಂತ್ರಸ್ಥೆ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆ ಮರೆಸಿಕೊಂಡಿರುವ ಅನುದೀಪ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಯು ಗಾಂಜಾ ಹಾಗೂ ಇನ್ನಿತರ ಮಾನಸಿಕ ಮಾದಕ ವ್ಯಸನಿಯಾಗಿದ್ದ ಎಂದು ತಿಳಿದು ಬಂದಿದೆ.