ಕೊರಿಯಾದ ಖ್ಯಾತ ಸಿಂಗರ್ ಜಿಮಿನ್ (BTS Jimin)ಯಂತೆ ಕಾಣಬೇಕು ಎಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದ ನಟ, ಸದ್ಯ ಸಾವನ್ನಪ್ಪಿದ್ದಾರೆ. ಸಂಗೀತ ಲೋಕದಲ್ಲಿ ಸಾಧನೆ ಮಾಡಬೇಕು ಎಂದು ಹಗಲಿರುಳು ಕನುಸು ಕಂಡಿದ್ದ ಯುವಕ, ಈಗ ಕಣ್ಮರೆಯಾಗಿದ್ದಾನೆ.
ಈ ಯುವಕ ಕೊರಿಯಾದ ಪ್ರಸಿದ್ಧ ಬಿಟಿಎಸ್ ಬ್ಯಾಂಡ್ನ ಸದಸ್ಯ ಜಿಮಿನ್ (Jimin)ಯ್ನು ತುಂಬಾ ಇಷ್ಟಪಡುತ್ತಿದ್ದ. ಅವನಂತೆಯೇ ಕಾಣಿಸಬೇಕು ಎಂದು ಬಯಸಿದ್ದ. 22 ವರ್ಷದ ಕೆನಡಿಯನ್ ನಟ ಸೇಂಟ್ ವಾನ್ ಕೊಲುಸಿ ಸಾವನ್ನಪ್ಪಿದ ದುರ್ದೈವಿ.

ಈ ನಟ ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯುವನಟನ ಸಾವಿಗೆ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎನ್ನಲಾಗಿದೆ. ಈ ನಟ, 12 ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತ ಸೇಂಟ್ ವಾನ್ ಕೊಲುಸಿ (Saint Von Colucci) ಒಟ್ಟು 12 ಬಾರಿ ಪ್ಲಾಸ್ಟಿಕ್ ಸರ್ಜರಿಗಾಗಿ 220,000 ಡಾಲರ್ ಅಂದರೆ 1,80,22,180 (ಭಾರತೀಯ ರೂಪಾಯಿ) ಖರ್ಚು ಮಾಡಿದ್ದರು ಎನ್ನಲಾಗಿದೆ.