ಬೆಂಗಳೂರು: ಭಾರತ ಹಾಗೂ ವಿದೇಶಿ ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ನಿರಂತರವಾಗಿ ಇಳಿಯುತ್ತಿದ್ದ ಚಿನ್ನ ಹಾಗೂ ಬೆಳ್ಳಿ ಈಗ ಮತ್ತೆ ಏರಿಕೆಯತ್ತ ಮುಖ ಮಾಡಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ.ಗಳಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ ಹೆಚ್ಚಾದರೂ 56 ಸಾವಿರ ರೂ. ಮಟ್ಟಕ್ಕಿಂತ ಕೆಳಗೆಯೇ ಇದೆ. ಅಪರಂಜಿ ಚಿನ್ನವೂ 61 ಸಾವಿರ ರೂ. ಗಿಂತ ಕೆಳಗೆ ಇದೆ. ಚಿನ್ನದಂತೆ ಬೆಳ್ಳಿ ಬೆಲೆಯೂ (Silver Price) ಏರಿಕೆ ಆಗಿದೆ.

ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,850 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,930 ರೂ. ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ 7,670 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,900 ರೂ. ಇದೆ. ಬೆಳ್ಳಿ 100 ಗ್ರಾಂಗೆ 8,070 ರೂ.ಗೆ ಬಂದು ನಿಂತಿದೆ.

ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಏರಿಕೆಯಾಗಬಹುದು ಎನ್ನಲಾಗುತ್ತಿದೆ. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70 ಸಾವಿರ ರೂ. ಗಡಿ ದಾಟಬಹುದು ಎನ್ನಲಾಗುತ್ತಿದೆ.

ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿಯ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 55,850 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 60,930 ರೂ
ಬೆಳ್ಳಿ ಬೆಲೆ 10 ಗ್ರಾಂ : 767 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ ):
ಮಲೇಷ್ಯಾ: 2,840 ರಿಂಗಿಟ್ (52,337 ರೂ.)
ದುಬೈ: 2232.50 ಡಿರಾಮ್ (49,811 ರೂ.)
ಅಮೆರಿಕ: 610 ಡಾಲರ್ (49,967 ರೂ.)
ಸಿಂಗಾಪುರ: 827 ಸಿಂಗಾಪುರ್ ಡಾಲರ್ (50,698 ರೂ.)
ಕತಾರ್: 2,300 ಕತಾರಿ ರಿಯಾಲ್ (51,763 ರೂ.)
ಓಮನ್: 243 ಒಮಾನಿ ರಿಯಾಲ್ (51,717 ರೂ.)
ಕುವೇತ್: 190 ಕುವೇತಿ ದಿನಾರ್ (50,843 ರೂ.)