Kornersite

Just In Sports

IPL 2023: ‘ಆರ್ ಸಿಬಿ ಪಾಸಿಟಿವ್’ ನಮ್ಮ ಬ್ಲಡ್ ಗ್ರೂಪ್!!

ಬೆಂಗಳೂರು : ಕೆಕೆಆರ್‌ (KKR) ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಸೋತರೂ, ಇಲ್ಲಿಯವರೆಗೆ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಈ ತಂಡವೇ ಹೊಂದಿದೆ.

ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು (RCB Fans) ಇವರಾಗಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ 17 ಓವರ್‌ ಮುಗಿಯುತ್ತಿದ್ದಂತೆ ಆರ್‌ ಸಿಬಿ ಸೋಲು ಖಚಿತವಾಯುತ. ಈ ವೇಳೆ ಅಸಮಾಧಾನಗೊಂಡ ಅಭಿಮಾನಿಗಳು ಕೆಕೆಆರ್‌ ತಂಡದ ನಾಯಕನ ವಿರುದ್ಧವೂ ತಿರುಗಿಬಿದ್ದಿದ್ದರು. ಕೆಕೆಆರ್‌ ವಿರುದ್ಧ ಪಂದ್ಯ ನಡೆಯುವಾಗ ಅಭಿಮಾನಿಗಳು ʻನಮಗೆ ಆರ್‌ ಸಿಬಿ ಶಾಶ್ವತ, ನಮ್ಮ ಬ್ಲಡ್‌ ಗ್ರೂಪ್‌ ಸಹ ಆರ್‌ ಸಿಬಿ ಪಾಸಿಟಿವ್‌ʼ ಎಂದು ಬರೆದು ಹಿಡಿದುಕೊಂಡಿದ್ದ ಪೋಸ್ಟರ್‌ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್‌ ತಂಡ 200 ರನ್‌ಗಳ ಬೃಹತ್‌ ಮೊತ್ತ ಪೇರಿಸಿತ್ತು. 201 ರನ್‌ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡ 8 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿ 21 ರನ್‌ಗಳಿಂದ ಸೋಲನುಭವಿಸಿತು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್