ಮಕ್ಕಳಿಗೆ ಸ್ಕೂಲಿಗೆ ರಜೆ ಇದ್ದಾಗ ಪೋಷಕರಿಗೆ ದೊಡ್ಡ್ ತಲೆನೋವು. ಇವಾಗ ಬೇರೆ ಬೇಸಿಗೆ ರಜೆ. ಮಕ್ಕಳ ಗಲಾಟೆ, ತುಂಟಾಟ, ದಿನಕ್ಕೊಂದು ವರೈಟಿ ಬೇಡಿಕೆಗಳು. ತಮ್ಮ ಬೇಡಿಕೆಗಳು ಪೂರೈಕೆ ಆಗದೇ ಇದ್ದಾಗ ಸಿಟ್ಟು, ಹಟ ಎಲ್ಲವೂ ಶುರುವಾಗುತ್ತದೆ. ಹಾಗಾದ್ರೆ ಮಕ್ಕಳ ಸಿಟ್ಟನ್ನ ಕಂಟ್ರೋಲ್ ಮಾಡುವುದು ಹೇಗೆ..?
ಬೇಸಿಗೆ ರಜೆಯಲ್ಲಿ ಮಕ್ಕಳನ್ನ ಕಂಟ್ರೋಲ್ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಇನ್ನು ಹೈಪರ್ ಆಕ್ಟಿವ್ ಇರೋ ಮಕ್ಕಳಂತೂ ಕೇಳಲೇ ಬೇಡಿ. ದಿನಕ್ಕೊಂಡು ಬೇಡಿಕೆ, ಗಂಟೆಗೊಂದು ಆಸೆ. ಇವೆಲ್ಲವನ್ನು ಪೂರೈಸುವಷ್ಟರಲ್ಲೇ ಪೋಷಕರು ಸುಸ್ತೋ ಸುಸ್ತು. ಮಕ್ಕಳ ಬೇಡಿಕೆ ಪೂರೈಕೆಯಾಗದಿದ್ರೆ ಮಕ್ಕಳಲ್ಲಿ ಸಿಕ್ಕಾಪಟ್ಟೆ ಸಿಟ್ಟು. ಮಕ್ಕಳು ಸಿಟ್ಟು ಮಾಡಿಕೊಂಡಾಗ ಪೋಷಕರು ಬೈದರೇ ಅವರ ಬಗ್ಗೆನೇ ತಪ್ಪಾಗಿ ತಿಳಿಯುತ್ತಾರೆ. ನನ್ನ ಅಪ್ಪ-ಅಮ್ಮ ನಮ್ಮನ್ನ ಪ್ರೀತಿಸುವುದಿಲ್ಲ ಎಂದು ದ್ವೇಷ ಮಾಡಲು ಶುರು ಮಾಡ್ತಾರೆ. ಹಾಗಾದ್ರೆ ಬೇಸಿಗೆ ರಜೆಯಲ್ಲಿ ಪೋಷಕರಿಗೆ ದೊಡ್ಡ ಚಾಲೆಂಜ್ ಆಗಿರುವ ಮಕ್ಕಳ ಸಿಟ್ಟು ಕಂಟ್ರೋಲ್ ಮಾಡುವುದು ಹೇಗೆ…?
ಮಕ್ಕಳು ಕೋಪಗೊಂಡಾಗ ಅವರಿಗಿಂತ ಹೆಚ್ಚು ಕೋಪಗೊಂಡು ಬೈಬಾರದು. ಮನೆಯಿಂದ ಹೊರಗೆ ಹಾಕುವುದು, ರೂಂಗೆ ಕಳುಹಿಸುವುದು, ಕತ್ತಲೆ ಕೋಣೆಗೆ ಕಳುಹಿಸೋದು ಯಾವುದೂ ಮಾಡಬಾರದು. ಮಕ್ಕಳ ಭಾವನೆಗಳನ್ನ ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಸಮಯ ಕೊಡಿ. ಅವರು ಹೇಳೋದನ್ನ ಸಮಾಧಾನವಾಗಿ ಕೇಳಿ. ಸ್ನೇಹಿತರಂತೆ ಅವರ ಜೊತೆ ಆಟವಾಡಿ. ಆಟ ಆಡ್ತಾ ಆದ್ತಾ ಯಾವುದು ಸರಿ ಯಾವುದು ತಪ್ಪು ಅನ್ನೋದನ್ನ ತಿಳಿ ಹೇಳಿ. ಮಕ್ಕಳು ಸಿಟ್ಟು ಮಾಡಿಕೊಂಡಾಗ ಹೆಚ್ಚು ಗದರದೇ ಸಮಾಧಾನದಿಂದ ಮಾತನಾಡಿ.
ಮಗುವಿನ ಆತ್ಮವಿಶ್ವಾಸ ಸಂಪಾದಿಸಿಕೊಳ್ಳಿ. ಅವರಲ್ಲಿ ನೆಗೆಟಿವ್ ಭಾವನೆ ಮೂಡಿಸಬೇಡಿ. ಬೇರೆ ಮಕ್ಕಳೊಂದಿಗೆ ಕಂಪೇರ್ ಮಾಡಬೇಡಿ. ಪ್ರತಿಯೊದು ಮಗುವು ಸ್ಪೇಷಲ್.