Kornersite

Bengaluru Just In Karnataka Politics State

Karnataka Assembly Election: ಶಾಸಕ ರೇಣುಕಾಚಾರ್ಯರಿಗೆ ಮುಖಭಂಗ; ಗ್ರಾಮದೊಳಗೆ ಬಿಡದ ಜನರು!

ಬಿಜೆಪಿ ಶಾಸಕ ಎಂ.ಪಿ. ರೇಣುಕಾರ್ಯಾಚರಿಗೆ ಮತದಾರರು ಚಳಿ ಬಿಡಿಸಿದ್ದಾರೆ.

ನ್ಯಾಮತಿ ತಾಲೂಕಿನ ಕಂಕನಹಳ್ಳಿ ತಾಂಡಾದಲ್ಲಿ (Kankanagalli Tanda) ನಡೆದಿದೆ. ಚುನಾವಣೆ (Assembly Election) ಹಿನ್ನೆಲೆ ಶಾಸಕ ರೇಣುಕಾಚಾರ್ಯ ತಮ್ಮ ಬೆಂಬಲಿಗರ ಜೊತೆಯಲ್ಲಿ ಕಂಕನಹಳ್ಳಿ ತಾಂಡಾಕ್ಕೆ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಒಳಗೆ ಬಿಡದೆ, ಮರಳಿ ಕಳುಹಿಸಿದ್ದಾರೆ.

ಈ ಗ್ರಾಮದಲ್ಲಿ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಎಸ್ಸಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೋಸ ಮಾಡಿದ್ದೀರಿ. ಒಳ ಮೀಸಲಾತಿ ತಂದು ಲಂಬಾಣಿ ಸಮುದಾಯದ ಮೀಸಲಾತಿ ಕಿತ್ತುಕೊಂಡಿದ್ದೀರಿ ಎಂದು ಯುವಕನೊಬ್ಬ ತೀವ್ರ ಆಕ್ರೋಶ ಹೊರ ಹಾಕಿದ್ದಾನೆ.
ಕೆಲಸವನ್ನೆ ಮಾಡದೇ ಬರೀ ಫೋಟೊ, ವಿಡಿಯೋ ಪೋಸ್ ಕೊಡುತ್ತೀರಿ. ನೀವು ನಮ್ಮ ಊರಿಗೆ ಬರಬೇಡಿ ಎಂದು ರೇಣುಕಾಚಾರ್ಯ ಅವರ ಮುಂದೆಯೇ ಆಕ್ರೋಶ ಹೊರ ಹಾಕಿದ್ದಾರೆ. ಆ ನಂತರ ಪ್ರಚಾರ ಮಾಡದೆ ರೇಣುಕಾಚಾರ್ಯ ಅವರು ಮರಳಿ ಹೋಗಿದ್ದಾರೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು