Tumakuru : ರಾಜ್ಯದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಎಲ್ಲ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಆಡಳಿತ ರೂಢ ಬಿಜೆಪಿಯು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಅನುಭವಿಸುವುದಕ್ಕಾಗಿ ರಾಷ್ಟ್ರೀಯ ನಾಯಕರ ಮೊರೆ ಹೋಗಿದೆ.
ಹೀಗಾಗಿ ಯಡಿಯೂರಪ್ಪ ಅವರು ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ರೋಡ್ ಶೋ ನಂತರ ಸೇಬಿಗಾಗಿ ಮುಗಿ ಬಿದ್ದ ಘಟನೆ ತುಮಕೂರು ಗ್ರಾಮಾಂತರದ ಹೆಬ್ಬೂರಿನಲ್ಲಿ ನಡೆದಿದೆ.
ತುಮಕೂರು ಗ್ರಾಮಾಂತರದ ಹೆಬ್ಬೂರಿನಲ್ಲಿ ಮತ ಪ್ರಚಾರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪಗೆ ಹಾಕಲು ಬೃಹತ್ ಸೇಬಿನ ಹಾರ ಮಾಡಿಸಲಾಗಿತ್ತು. ಅಭಿಮಾನಿಗಳು ಕ್ರೇನ್ ಬಳಸಿ ಸೇಬಿನ ಹಾರ ಹಾಕಿ, ಭರ್ಜರಿಯಾಗಿ ಸ್ವಾಗತಿಸಿದರು. ಆದರೆ, ರೋಡ್ ಶೋ ಮುಗಿದಿದ್ದೇ ತಡ ಜನರು ಸೇಬಿಗಾಗಿ ಮುಗಿಬಿದ್ದಿದ್ದರು.
ಯಡಿಯೂರಪ್ಪ ರೋಡ್ ಶೋ ತೆರಳಿದ ಬಳಿಕ ಹಾರದಲ್ಲಿದ್ದ ಸೇಬು ಕಿತ್ತುಕೊಳ್ಳಲು ನೂಕು ನುಗ್ಗಲು ಆಗಿದೆ. ಈ ಸಂದರ್ಭದಲ್ಲಿ ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟಿದ್ದಾರೆ.