Chamarajanagar : ಪ್ರಧಾನಿ ನರೇಂದ್ರ ಮೋದಿ (Narendra Modi)ಅವರನ್ನು ಕಾಂಗ್ರೆಸ್ (Congress) ಎಷ್ಟು ಬೈಯ್ಯುತ್ತದೆಯೋ ಅಷ್ಟು ಕಮಲ ಅರಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಜನರ ವಿಶ್ವಾಸವಿಲ್ಲದೆ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ ಹಂಚುತ್ತಿದೆ. ಭ್ರಷ್ಟಾಚಾರದ ಗ್ಯಾರಂಟಿ, ತುಷ್ಟೀಕರಣದ ಗ್ಯಾರಂಟಿ, ಕುಟುಂಬ ರಾಜಕಾರಣದ ಗ್ಯಾರಂಟಿ, ಗಲಾಟೆಯ ಗ್ಯಾರಂಟಿ ಕೊಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಮರಳಿ ತರುತ್ತೇವೆ ಎಂದು ಹೇಳುತ್ತಿದೆ. ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಾಂಗ್ರೆಸ್ ವಾಪಸ್ ತೆಗೆಯುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮತ ಚಲಾಯಿಸಿದರೆ ರೈತರ ಉದ್ಧಾರ ಸಾಧ್ಯ. ಕಾಂಗ್ರೆಸ್‍ಗೆ ವೋಟ್ ಮಾಡಿದರೆ ದೆಹಲಿ ಎಟಿಎಂ ಮಾಡಿದ ಹಾಗೇ ಆಗುತ್ತದೆ. ಮುಸ್ಲಿಂ 4% ಮೀಸಲಾತಿ ತೆಗೆದು ಒಕ್ಕಲಿಗ, ಲಿಂಗಾಯತ, ದಲಿತರಿಗೆ ಕೊಟ್ಟಿದ್ದೇವೆ. ಖರ್ಗೆ, ಮೋದಿಯನ್ನು ವಿಷ ಸರ್ಪಕ್ಕೆ ಹೋಲಿಸುತ್ತಾರೆ. ದೇಶದ ಜನರಿಗೆ ಮೋದಿ ಮನೆ, ಅಕ್ಕಿ ಕೊಟ್ಟಿದ್ದಾರೆ. ಜನರಿಗೆ ವಿಶ್ವಾಸವಿಲ್ಲದ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ. ಎಲ್ಲದಕ್ಕೂ ಜಾಸ್ತಿ ಕುಟುಂಬ ರಾಜಕಾರಣ. ಗಲಾಟೆ ಮಾಡುವ ಗ್ಯಾರಂಟಿ ಎಂದು ಹೇಳಿದ್ದಾರೆ.