ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಂಡಾಯವೆದ್ದಿರುವ 24 ಅಭ್ಯರ್ಥಿಗಳನ್ನು ಉಚ್ಛಾಟನೆ ಮಾಡಲಾಗಿದೆ.

ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಶಾಸಕರು, ಸಚಿವರು, ಕಾಂಗ್ರೆಸ್ ಘಟಕದಲ್ಲಿ ಪ್ರಮುಖ ಸ್ಥಾನಮಾನ ಹೊಂದಿದ್ದವರು, ಕಾಂಗ್ರೆಸ್ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಟಿಕೆಟ್ ಸಿಗದೇ ಬಂಡಾಯ ಸ್ಪರ್ಧೆ ಮಾಡಿದ್ದಾರೆ. ಅಲ್ಲದೇ, ಹಲವರು ಪಕ್ಷದ ಬಾವುಟ ಉಪಯೋಗಿಸಿ ಪ್ರಚಾರ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷವು ಶಿಸ್ತು ಕ್ರಮ ಕೈಗೊಂಡಿದೆ. ಬಂಡಾಯವೆದ್ದ 24 ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಲಾಗಿದೆ.

ಬಂಡಾಯದ ಬಾವುಟ ಹಾರಿಸಿದ್ದ 24 ಅಭ್ಯರ್ಥಿಗಳನ್ನು ಪಕ್ಷದಿಂದ ಹೊರಗೆ ಹಾಕಲಾಗಿದೆ. ಪಕ್ಷದಿಂದ ಉಚ್ಛಾಟನೆಗೊಂಡ ಸದಸ್ಯರು ಮುಂದಿನ 6 ವರ್ಷಗಳ ಕಾಲ ಮತ್ತೆ ಪಕ್ಷವನ್ನು ಸೇರುವಂತಿಲ್ಲ. ಈಗ ಪಕ್ಷದಿಂದ ಉಚ್ಛಾಟನೆಗೊಂಡ ಎಲ್ಲ ಸದಸ್ಯರು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದು ಸ್ಪರ್ಧೆ ಮಾಡಿದ್ದಾರೆ. ಈ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.
ಉಚ್ಛಾಟನೆಗೊಂಡ ಬಂಡಾಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ..
ವಿಧಾನಸಭಾ ಕ್ಷೇತ್ರ ಹೆಸರು ಪಕ್ಷದಲ್ಲಿದ್ದ ಸ್ಥಾನ
ಶಿರಹಟ್ಟಿ ರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕ
ಕುಣಿಗಲ್ ಬಿ.ಬಿ. ರಾಮಸ್ವಾಮಿಗೌಡ ಮಾಜಿ ಶಾಸಕ
ಜಗಳೂರು ಹೆಚ್.ಪಿ. ರಾಜೇಶ್ ಮಾಜಿ ಶಾಸಕ
ಅರಕಲಗೂಡು ಕೃಷ್ನೇಗೌಡ ಕಾಂಗ್ರೆಸ್ ನಾಯಕ
ಬೀದರ್ ದಕ್ಷಿಣ ಚಂದ್ರಾ ಸಿಂಗ್ ಕೆಪಿಸಿಸಿ- ಸಂಯೋಜಕ
ತರೀಕೆರೆ ಗೋಪಿಕೃಷ್ಣ ಡಿಸಿಸಿ- ಉಪಾಧ್ಯಕ್ಷ
ಖಾನಾಪುರ ಇರ್ಫಾನ್ ತಾಳಿಕೋಟೆ ಬೆಳಗಾವಿ ಮಾಜಿ ಯುವ ಕಾಂಗ್ರೆಸ್ ಮುಖಂಡ
ಹರಪನಹಳ್ಳಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ತೇರದಾಳ ಡಾ. ಪದ್ಮಜೀತ್ ನಾಡಗೌಡ ಕಿಸಾಬ್ ಸೆಲ್- ಉಪಾಧ್ಯಕ್ಷ
ಹು-ಧಾರವಾಡ ಪಶ್ಚಿಮ ಬಸವರಾಜ್ ಮಲ್ಕಾರಿ ಮಾಜಿ ಬ್ಲಾಕ್ ಅಧ್ಯಕ್ಷ