Kornersite

Uncategorized

IPL 2023: ಮತ್ತೆ ನಿರಾಸೆ ಮೂಡಿಸಿದ ರೋಹಿತ್ ಪಡೆ; ಪಾಯಿಂಟ್ ಟೇಬಲ್ ನಲ್ಲಿ 2ನೇ ಸ್ಥಾನಕ್ಕೆ ಜಿಗಿತ!

Chennai : ಬಿಗಿ ಬೌಲಿಂಗ್‌ ದಾಳಿ ಹಾಗೂ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು, ಪ್ಲೇ ಆಫ್ ಹಾದಿ ಸುಗಮಗೊಳಿಸಿಕೊಂಡಿದೆ.

ಈಗಾಗಲೇ ಚೆನ್ನೈ ತಂಡವು ಆಡಿರುವ 11 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಸಾಧಿಸಿದ್ದು, 13 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದರೆ, 10 ಪಂದ್ಯಗಳಲ್ಲಿ ತಲಾ 5ರಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ 11 ಅಂಕಗಳೊಂದಿಗೆ 3 ಹಾಗೂ ರಾಜಸ್ಥಾನ್‌ ರಾಯಲ್ಸ್‌ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡವು ನಿಗದಿತ 20 ಓವರ್‌ ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿತ್ತು. 140 ರನ್‌ ಗುರಿ ಪಡೆದ ಚೆನ್ನೈ 17.4 ಓವರ್‌ ಗಳಲ್ಲಿಯೇ 4 ವಿಕೆಟ್‌ ನಷ್ಟಕ್ಕೆ 140 ರನ್‌ ಗಳಿಸಿ ಜಯ ಸಾಧಿಸಿದೆ.

ಗೆಲುವಿಗೆ 140 ರನ್‌ ಗಳ ಸಾಧಾರಣ ರನ್‌ ಗುರಿ ಪಡೆದ ಚೆನ್ನೈ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡಲು ಮುಂದಾಯಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ 16 ಎಸೆತಗಳಲ್ಲಿ 30 ರನ್‌ ಗಳಿಸಿ ಔಟ್ ಆದರು. ಅಜಿಂಕ್ಯಾ ರಹಾನೆ ಕೂಡ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ಸಾಗಿದ ಚೆನ್ನೈ ಬಹುಬೇಗನೆ ಗುರಿ ತಲುಪಿತು.
ಅಂಬಟಿ ರಾಯುಡು 12 ರನ್‌ ಹಾಗೂ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಶಿವಂ ದುಬೆ 25 ರನ್‌ ಸಿಡಿಸಿದರು. ಕೊನೆಗೆ ನಾಯಕ ಎಂ. ಧೋನಿ 2 ಎಸೆತಗಳಲ್ಲಿ 3 ರನ್ ಗಳಿಸಿ ಅಜೇಯರಾಗಿ ಉಳಿದರು.

ಮುಂಬೈ ಪರ ಪಿಯೂಷ್‌ ಚಾವ್ಲಾ 2 ವಿಕೆಟ್‌, ಟ್ರಿಸ್ಟಾನ್ ಸ್ಟಬ್ಸ್, ಆಕಾಶ್‌ ಮಧ್ವಾಲ್‌ ತಲಾ ಒಂದು ವಿಕೆಟ್ ಪಡೆದರು. ಮೊದಲು ಬ್ಯಾಟಿಂಗ್‌ ಮಾಡಿದ ಮುಂಬಯಿ ಇಂಡಿಯನ್ಸ್ ಕಳಪೆ ಆಟ ಮುಂದುವರೆಸಿತು. ಕ್ಯಾಮರೂನ್‌ ಗ್ರೀನ್‌ 6 ರನ್‌, ಇಶಾನ್‌ ಕಿಶನ್‌ 7 ರನ್‌ ಗಳಿಸಿ ಔಟಾಗುತ್ತಿದ್ದಂತೆ ನಾಯಕ ರೋಹಿತ್‌ ಶರ್ಮಾ ಮತ್ತೆ ಡಕೌಟ್‌ ಆಗಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಸೂರ್ಯಕುಮಾರ್‌ ಯಾದವ್‌ ಹಾಗೂ ನೆಹಾಲ್‌ ವಧೇರಾ ಸಣ್ಣ ಜೊತೆಯಾಟ ನೀಡಿದರು. 46 ಎಸೆತಗಳಲ್ಲಿ ಈ ಜೋಡಿ 55 ರನ್‌ ಗಳಿಸಿತ್ತು. ಸೂರ್ಯಕುಮಾರ್‌ ಔಟಾಗಿ ಮತ್ತೆ ನಿರಾಸೆ ಮೂಡಿಸಿದರು. ನೆಹಾಳ್‌ ವಧೇರಾ ಅರ್ಧಶತಕ ಸಿಡಿಸಿ ಆಸರೆಯಾದರು. ಮುಂಬೈ ಪರ ನೆಹಾಲ್‌ ವಧೇರಾ 64 ರನ್‌, ಸೂರ್ಯಕುಮಾರ್‌ ಯಾದವ್‌ 26 ರನ್‌, ಚೆನ್ನೈ ಪರ ಮಹೇಶ್‌ ಪತಿರಣ 3 ವಿಕೆಟ್‌, ದೀಪಕ್‌ ಚಹಾರ್‌, ತುಷಾರ್‌ ದೇಶ್‌ಪಾಂಡೆ ತಲಾ 2 ವಿಕೆಟ್‌, ರವೀಂದ್ರ ಜಡೇಜಾ 1 ವಿಕೆಟ್‌ ಪಡೆದರು.

You may also like

Astro 24/7 Uncategorized

Daily Horoscope: ಇಂದು ಈ ರಾಶಿಯವರಿಗೆ ಇದೆ ಸಖತ್ ಲಾಭ; ಆದರೆ, ಈ ರಾಶಿಯವರು ಎಚ್ಚರವಾಗಿರಲೇಬೇಕು!

ಇಂದು ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಿದ್ದು, ಗುರುವು ಮೇಷ ರಾಶಿ ಪ್ರವೇಶ ಮಾಡುತ್ತಾನೆ. ಇದರೊಂದಿಗೆ ಕೃತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಹೀಗಾಗಿ ಪರಿಸ್ಥಿತಿಯಲ್ಲಿ, ಗ್ರಹಗಳು ಮತ್ತು ನಕ್ಷತ್ರಪುಂಜಗಳ
Bengaluru Entertainment Gossip Just In Karnataka Mix Masala Sandalwood Uncategorized

ಹುಡುಗಾಟಕ್ಕೆ ಪ್ರಾಣ ಬಿಟ್ಟ ಅಗ್ನಿಸಾಕ್ಷಿ ಸಂಪತ್: ಸಾವಿನ ರಹಸ್ಯ ಬಿಚ್ಚಿಟ್ಟ ಸ್ನೇಹಿತ

ಸ್ನೇಹಿತ ಮಾತನಾಡಿದ್ದಾರೆ. ನೆಲಮಂಗಲದ ಅರಿಶಿಣಕುಂಟೆ ಸಮೀಪದ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಇದಕ್ಕೆಲ್ಲ ಸ್ನೇಹಿತ ತೆರೆ ಎಳೆದಿದ್ದಾರೆ. ಇನ್ನು