ಬೆಂಗಳೂರಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಟ ನಡೆಸಿದ್ದಾರೆ ರಾಹುಲ್ ಗಾಂಧಿ. ಬೆಂಗಳೂರಿನ ಏರ್ಲೈನ್ಸ್ ಹೋಟೆಲ್ ಗೆ ಬಂದಿದ್ದ ರಾಹುಲ್ ಗಾಂಧಿ. ಹಾಫ್ ಹೆಲ್ಮೆಟ್ ಹಾಕ್ಕೊಂಡು ಬೈಕ್ ನಲ್ಲಿ ಹೊರಟ ದೃಶ್ಯ ಇದೀಗ ವೈರಲ್ ಆಗುತ್ತಿದೆ.
ಸಿಂಪಲ್ ವ್ಯಕ್ತಿಯಂತೆ ಸಿಂಪಲ್ ಆಗಿ ಬಂದು ಹಾಫ್ ಹೆಲ್ಮೆಟ್ ಹಾಕಿಕೊಂಡು, ಫುಡ್ ಡಿಲಿವರಿ ಬಾಯ್ ಹಿಂದೆ ಕುಳಿತು ಹೋದರು ರಾಗುಲ್ ಗಾಂಧಿ. ಕ್ಷಣಾರ್ಧದಲ್ಲೇ ರಾಹುಲ್ ಗಾಂಧಿಯನ್ನ ನೋಡಲು ಜನರು ಸೇರಲು ಶುರು ಮಾಡಿದ್ರು. ಆದ್ರೆ ರಾಹುಲ್ ಗಾಂಧಿ ಮಾತ್ರ ಸಿಂಪಲ್ ವ್ಯಕ್ತಿಯಂತೆ ಯಾವುದೇ ಮುಲಾಜಿಲ್ಲದೇ ಸ್ಕೂಟರ್ ಏರಿ ಹೊರಟರು.
ಸಹಜವಾಗಿ ದೊಡ್ಡ ವ್ಯಕ್ತಿಗಳು ರಸ್ತೆಗೆ ಇಳಿಯುತ್ತಾರೆ ಅಂದ್ರೆ ಅದೆಷ್ಟು ಭದ್ರತೆ ಇರುತ್ತದೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಯಾವುದೇ ಭದ್ರತೆ ಇಲ್ಲದೇ ಸಿಂಪಲ್ ಆಗಿ ಬೈಕ್ ರೈಡ್ ಮಾಡಿದ್ದಾರೆ. ರಾಹುಲ್ ಗಾಂಧಿಯನ್ನ ಕೂರಿಸಿಕೊಂಡ ಫುಡ್ ಡಿಲಿವರಿ ಬಾಯ್ ಗೆ ಶಾಕ್ ಜೊತೆಗೆ ಸಖತ್ ಖುಷಿಯಾಗಿತ್ತು.
ಇನ್ನು ರಾಹುಲ್ ಗಾಂಧಿ ಬರೋವಾಗ ಬಾಲಕನೊಬ್ಬ ಅಳುತ್ತಿದ್ದ್. ಆ ಬಾಲಕನನ್ನ ಮಾತನಾಡಿಸಿ ಫೋಟೋ ಕೂಡ ತೆಗೆಸಿಕೊಂಡರು.