Belagavi : ಮತದಾರರಿಗೆ ಹಂಚಲು ಭಾರೀ ಪ್ರಮಾಣದಲ್ಲಿ ತಂದಿದ್ದ ಕುಕ್ಕರ್(Cooker) ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದಲ್ಲಿ 25 ಲಕ್ಷ ರೂ. ಮೌಲ್ಯದ 1800 ಕುಕ್ಕರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಈ ಒಂದು ಕುಕ್ಕರ್ ನ ಬೆಲೆ 1400 ರೂ. ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 25 ಲಕ್ಷ ಮೌಲ್ಯದ ಕುಕ್ಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಕುಕ್ಕರ್ ಡಬ್ಬಿ ಮೇಲೆ ಯಾವುದೇ ಪಕ್ಷದ ಚಿನ್ಹೆ, ಅಭ್ಯರ್ಥಿ ಹೆಸರು, ಫೋಟೋ ಕಂಡು ಬಂದಿಲ್ಲ. ಈ ಕುರಿತು ಚುನಾವಣಾ ಅಧಿಕಾರಿಗಲು ತನಿಖೆ ಮುಂದುವರೆಸಿದ್ದಾರೆ. ಬೈಲಹೊಗಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.