NewDelhi : ಇತ್ತೀಚೆಗಷ್ಟೇ ತಿಹಾರ್ ಜೈಲಿನಲ್ಲಿ (Tihar Jail) ಗ್ಯಾಂಗ್ ಸ್ಟರ್ (Gangster) ಟಿಲ್ಲು ತಾಜ್ ಪುರಿ ಹತ್ಯೆಯಾಗಿದ್ದರು. (Tillu Tajpuriya) ಸಹ ಕೈದಿಗಳು ಇರಿದು ಕೊಲೆ ಮಾಡಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತಮಿಳುನಾಡು ವಿಶೇಷ ಪೊಲೀಸ್ನ (TNSP) 7 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಸಹ ಕೈದಿಗಳು ಟಿಲ್ಲು ತಾಜ್ಪುರಿಯಾ ಮೇಲೆ ಹಲ್ಲೆ ನಡೆಸಿ, ಇರಿದು, ಬರ್ಬರವಾಗಿ ಹತ್ಯೆ ನಡೆಸಿರುವುದುನ್ನು ನೋಡುತ್ತ ನಿಂತಿದ್ದ ತಮಿಳುನಾಡಿನ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅವರನ್ನು ತಮಿಳುನಾಡಿಗೆ ಮರಳಿ ಕಳುಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಟಿಲ್ಲು ತಾಜ್ಪುರಿಯಾ ಹತ್ಯೆಯ ನಂತರ ದೆಹಲಿ ಕಾರಾಗೃಹಗಳ ಮಹಾನಿರ್ದೇಶಕ ಸಂಜಯ್ ಬೇನಿವಾಲ್ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸರಿಗೆ ಪತ್ರ ಬರೆದಿದ್ದರು. ಅದರಂತೆ ತಮ್ಮ ಸಿಬ್ಬಂದಿಯ ಆಪಾದಿತ ನಿರ್ಲಕ್ಷ್ಯದ ಬಗ್ಗೆ ಟಿಎನ್ಎಸ್ಪಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗುಂಡು ಹಾರಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಪ್ರತಿದಾಳಿ ನಡೆಸಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಗುಂಡು ಹಾರಿಸುವಂತೆ ಸೂಚನೆ ನೀಡಿದ್ದ ತಾಜ್ ಪುರಿಯಾ ಪ್ರಮುಖ ಆರೋಪಿಯಾಗಿದ್ದು, ಜೈಲು ಸೇರಿದ್ದ.
ಜಿತೇಂದರ್ ಗೋಗಿ ಗ್ಯಾಂಗ್ ಹಾಗೂ ಟಿಲ್ಲು ಗ್ಯಾಂಗ್ ನಡುವೆ ಕಳೆದ ಹಲವಾರು ವರ್ಷಗಳಿಂದಲೂ ದ್ವೇಷವಿತ್ತು. ಜೈಲಿನೊಳಗೆ ಟಿಲ್ಲುನನ್ನು ಹತ್ಯೆಗೈದ ಆರೋಪಿಗಳು ಗೋಗಿ ಗ್ಯಾಂಗ್ನವರು ಎನ್ನಲಾಗಿದೆ.