Jaipur : ಭಾರತದಲ್ಲಿ (India) ಮೊದಲ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಲಿಥಿಯಂ (Lithium) ನಿಕ್ಷೇಪ ಪತ್ತೆಯಾಗಿತ್ತು.

ಇದಾದ 3 ತಿಂಗಳ ನಂತರ ರಾಜಸ್ಥಾನದಲ್ಲಿ (Rajasthan) ಭಾರೀ ಪ್ರಮಾಣದ ಲಿಥಿಯಂ ಪತ್ತೆಯಾಗಿದ್ದು, ಇದಕ್ಕೆ ಭಾರತದ ಶೇ.80ದಷ್ಟು ಬೇಡಿಯನ್ನು ಪೂರೈಸುವ ಸಾಮರ್ಥ್ಯವಿದೆ ಎನ್ನಲಾಗಿದೆ. ನಗೌರ್ ಜಿಲ್ಲೆಯ ದೇಗಾನಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಿಥಿಯಂನ ಗಣನೀಯ ಪ್ರಮಾಣದ ನಿಕ್ಷೇಪಗಳನ್ನು ಗುರುತಿಸಿರುವುದಾಗಿ ರಾಜಸ್ಥಾನದ ಸರ್ಕಾರಿ ಅಧಿಕಾರಿಗಳು ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ತಿಳಿಸಿದೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 59 ದಶಲಕ್ಷ ಟನ್ ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಗಿತ್ತು. ರಾಜಸ್ಥಾನದಲ್ಲಿ ಪತ್ತೆಯಾಗಿರುವ ನಿಕ್ಷೇಪ ಅತ್ಯಂತ ದೊಡ್ಡ ಪ್ರಮಾಣದ್ದಾಗಿದ್ದು, ಇದು ದೇಶದಲ್ಲಿಯೇ ಬೇಡಿಕೆಯ ಹಾಗೂ ಅವಶ್ಯಕತೆಯ ಸುಮಾರು 80% ದಷ್ಟು ಪೂರೈಕೆ ಮಾಡಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವದಲ್ಲಿ ಲಿಥಿಯಂ ಉತ್ಪಾದನೆ ಆಸ್ಟ್ರೇಲಿಯಾದಲ್ಲಿ 47% ಇದ್ದು, ಚಿಲಿಯಲ್ಲಿ 30% ಇದೆ. ಚೀನಾದಲ್ಲಿ 15% ಇದೆ. ಖನಿಜ ಸಂಸ್ಕರಣೆ ಚೀನಾದಲ್ಲಿ 56% ಮಾಡಲಾಗುತ್ತಿದ್ದು, ಚಿಲಿಯಲ್ಲಿ 29% ಹಾಗೂ ಅರ್ಜೆಂಟೀನಾದಲ್ಲಿ 10% ನಷ್ಟು ಮಾಡಲಾಗುತ್ತದೆ.