Madikeri : ರಾಜ್ಯದಲ್ಲಿ ವಿಧಾನಸಬೆ ಮತದಾನ (Karnataka Assembly Election) ರಂಗೇರಿದೆ. ಮತದಾರರು ಉತ್ಸುಕತೆಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮಹಿಳೆಯೊಬ್ಬರು 4 ತಿಂಗಳ ಮಗುವಿನೊಂದಿಗೆ ಆಗಮಿಸಿ, ಮತದಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ನಗರದ ಕಾವೇರಿ ಹಾಲ್ ಹತ್ತಿರದ ನಿವಾಸಿ ಆಶಿಕಾ ಎಂಬುವವರು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಚುನಾವಣೆ ಘೋಷಣೆಯಾಗಿದ್ದರಿಂದಾಗಿ ತಮ್ಮ ಹಕ್ಕು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ 4 ತಿಂಗಳ ಹಸುಗೂಸನ್ನೇ ಹೊತ್ತುಕೊಂಡು ಮತಗಟ್ಟೆಗೆ ಆಗಮಿಸಿದ್ದಾರೆ.
ಮಡಿಕೇರಿಯ (Madikeri) ಸಂತಜೋಸೆಫರ್ ಶಾಲೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತ (Vote) ಚಲಾಯಿಸಿದ್ದಾರೆ. ಈ ಮೂಲಕ ಮತದಾನ ಮಾಡಲು ನಿರ್ಲಕ್ಷ್ಯ ಮಾಡುವವರಿಗೆ ಮಾದರಿಯಾಗಿ ಸಂದೇಶ ರವಾನಿಸಿದ್ದಾರೆ. ಇಂದು ರಾಜ್ಯದಲ್ಲಿ ಒಂದೇ ಹಂತದಲ್ಲಿ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಮತದಾರರು ಶಾಂತಿಯಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.