Gadag : ರಾಜ್ಯ ಚುನಾವಣೆ (Election) ಹಿನ್ನೆಲೆಯಲ್ಲಿ ಮತದಾನ (Voting) ನಡೆಯುತ್ತಿದ್ದು, ಗದಗದಲ್ಲಿ (Gadag) 10 ದಿನದ ಬಾಣಂತಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ವರ್ಷಾ ಪವಾರ್ ಗದಗ ನಗರದ ಮತಗಟ್ಟೆ ಸಂಖ್ಯೆ 85ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಚಲಾಯಿಸಿದ್ದಾರೆ. ಬಾಣಂತಿಯಾಗಿದ್ದರಿಂದ ಇತರೆ ಮತದಾರರು ಅವರಿಗೆ ಮೊದಲು ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಬಾಣಂತಿ ಮೊದಲು ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸದ್ಯ ಬಾಣಂತಿಯಾಗಿದ್ದರೂ ಹಕ್ಕು ಚಲಾಯಿಸಿದ್ದಕ್ಕೆ, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಕ್ಕು ಚಲಾಯಿಸದಿರುವವರಿಗೆ ಇದೊಂದು ಸಂದೇಶ ಎಂದು ಹೇಳುತ್ತಿದ್ದಾರೆ.