ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಪೆಡ್ಲರ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಬರೋಬ್ಬರಿ 7.06 ಕೊಟಿ ಕೊಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.
ಬೆಂಗಳೂರು ಪೊಲೀಸರು ಮಾದಕ ದ್ರವ್ಯಗಳ ವಿರುದ್ದ ಕಾರ್ಯಾಚರಣೆ ನಡೆಸಿ, ಒಟ್ಟು 19 ಡ್ರಗ್ ಪೆಡ್ಲರ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 7.06 ಕೊಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ವಿರೋಧಿ ವಿಭಾಗ ಈ ಕಾರ್ಯಾಚರಣೆ ನಡೆಸಿದ್ದು, ಮಾಹಿತಿಯನ್ನ ಟ್ವಿಟ್ ಮಾಡಿದ್ದಾರೆ.

ಈ ಕಾರ್ಯಾಚರಣೆ ವೇಳೆ 51 ಕೆ.ಜಿ ಗಾಂಜಾ ಮತ್ತು 5 ಕೆ.ಜಿ ಹ್ಯಾಶಿಶ್ ಆಯಿಲ್, 236 ಎಕ್ಸ್ ಟಾಸಿ ಮಾತ್ರೆಗಳು, 34 ಎಲ್ ಎಸ್ ಡಿ ಸ್ಟ್ರಿಪ್ , 23 ಗ್ರಾಂ ಕೊಕೇನ್, 14 ಒಜಿ ಎಂಡಿಎಂಎ, 12 ಫೋನ್ ಗಳು, 1 ಬೈಕ್ ಮತ್ತು ಒಂದು ಕಾರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ಪೊಲೀಸರು ಮಾಡಿದ ಟ್ವಿಟ್ ವೈರಲ್ ಆಗುತ್ತಿದೆ. ಟ್ವಿಟ್ ನಲ್ಲಿ ಬೆಂಗಳೂರು ಕೇಂದ್ರ ಕಾರಾಗ್ರಹಕ್ಕೆ ಹೊಸ ಬಾಡಿಗೆದಾರರು ಬಂದಿದ್ದಾರೆ. ಸಮಯದ ಬಾಡಿಗೆ ಪಾವತಿಸಲಾಗುತ್ತದೆ. ನಮ್ಮ ಆತಿಥ್ಯ ಅದ್ಬುತವಾಗಿದೆ ಎಂದು ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದಾರೆ. ಇದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಿಕ್ಕಾಪಟ್ಟೆ ಕಮೆಂಟ್ ಗಳು ಬರುತ್ತಿವೆ. ನಿಮ್ಮ ಕೆಲಸದ ಜೊತೆ ನಿಮ್ಮ ಹಾಸ್ಯ ಪ್ರಜ್ನೆಯೂ ಚೆನ್ನಾಗಿದೆ. ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಎಂದು ಕಮೆಂಟ್ ಮಾಡುತ್ತಿದ್ದಾರೆ.