ಕಾಂಗ್ರೆಸ್ ಚುನಾವಣೆಗೂ ಮುನ್ನ ಹಲವು ಯೋಜನೆಗಳನ್ನು ಘೋಷಣೆ ಮಾಡಿದೆ. ಸರ್ಕಾರ ರಚನೆಯಾದ ಮೇಲೆ ಈ ಎಲ್ಲ್ ಯೋಜನೆಗಳನ್ನ್ ಪೂರ್ಣಗೊಳಿಸುತ್ತಾ ಅನ್ನೋದು ಮತದಾರರ ಮುಂದಿರುವ ಪ್ರಶ್ನೇ. ಹಾಗಾದ್ರೆ ಕಾಂದ್ರೆ ಯಾವೆಲ್ಲ ಯೋಜನೆಗಳನ್ನ ಪೂರ್ಣಗೊಳಿಸೋದಾಗಿ ಹೇಳಿತ್ತು ಬನ್ನಿ ನೋಡೋಣ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ಮತ್ತೆ ಜಾರಿಗೆ ತರಲಿದೆ.
ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಈ ಯೋಜನೆ ಮತ್ತೆ ಜಾರಿಗೆ ತರಲಾಗುವುದು ಎಂದು ಹೇಳಿದೆ.
ಅಲ್ಪಸಂಖ್ಯಾತರಿಗೆ ಒಬಿಸಿ 2ಬಿ ಬರ್ಗದಡಿ ಶೇ 4ರಷ್ಟು ಮೀಸಲಾತಿ ಪುನಹ ಸಿಗಲಿದೆ.
ಗೃಹಲಕ್ಷ್ಮೀ ಯೋಜನೆ ಮೂಲಕ ಕರ್ನಾಟಕದ ಪ್ರತಿಯೊಂದು ಮನೆಯ ಯಜಮಾನಿಗೆ 2 ಸಾವಿರ ಸಹಾಯಧನ ಸಿಗಲಿದೆ.
ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯೂತ್ ಒದಗಿಸಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂ ದಿಂದ 15,000 ರೂ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಆಶಾ ಕಾರ್ಯಕರ್ತೆಯರ ವೇತನ 10 ಸಾವಿರ ರೂಪಾಯಿಗೆ ಏರಿಕೆ ಮತ್ತು ವಿಶ್ರಾಂತಿ ವೇತನ 2ಲಕ್ಷ ರೂ ನೀಡುವುದಾಗಿ ಹೇಳಿದೆ.
ಹಾಲಿನ ಸಬ್ಸಿಡಿ ಪ್ರತಿ ಲೀಟರ್ ಗೆ 5ರಿಂದ 7 ರೂಗೆ ಹೆಚ್ಚಳ.
ಜಾನುವಾರು ಖರೀದಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂವರೆಗೆ ಸಾಲ
ರಾಜ್ಯದಲ್ಲಿ ಎಲ್ಲ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪಾಸ್ ಪ್ರಯಾಣ ಸೌಲಭ್ಯ.
ಪ್ರತಿ ಜಿಲ್ಲೆಯಲ್ಲಿ ಶಿತಲೀಕರಣ ಸ್ಥಾಪನೆ
ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ದು
ಎಪಿಎಂಸಿ ಕಾಯ್ದೆ ರದ್ದು
ರೈತರ ಮೇಲಿನ ಎಲ್ಲಾ ಕೇಸ್ ವಾಪಸ್
ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಆರಂಭ
ಸಾವಯವ ಕೃಷಿ ಯೋಜನೆಗೆ 2500 ಕೋಟಿ ಹೂಡಿಕೆ
ಪತ್ರಕರ್ತರ ಕ್ಷೇಮಾಭಿವೃದ್ದಿ ಸ್ಥಾಪನೆ
ಜೇನು ಸಾಕಾಣಿಕೆಗೆ 50 ಕೋಟಿ
ಹೀಗೆ ಇನ್ನು ಕೆಲವು ಯೋಜನೆಗಳು ಕಾರ್ಯಾರೂಪಕ್ಕೆ ತರುವುದಾಗಿ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನರಿಗೆ ಭರವಸೆ ನೋಡಿದೆ. ಈ ಎಲ್ಲ ಯೋಜನೆಗಳು ಸಾಕಾರಗೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕು