Kornersite

Crime International Just In Politics

ಏಸು ಭೇಟಿಯಾಗುತ್ತಾನೆಂದು ಪಾದ್ರಿ ಮಾತು ನಂಬಿ ಜೀವಂತ ಸಮಾಧಿಯಾದ ಜನ; 200 ಜನ ಜೀವಂತ ಸಮಾಧಿ, 600 ಜನ ನಾಪತ್ತೆ!

ಪಾದ್ರಿಯೊಬ್ಬರ ಮಾತು ನಂಬಿ 200 ಜನ ಜೀವಂತ ಸಮಾಧಿಯಾಗಿದ್ದು, ನಾಪತ್ತೆಯಾದವರ ಸಂಖ್ಯೆ 600ಕ್ಕೆ ಏರಿಕೆ ಕಂಡಿದೆ.

ಜೀವಂತ ಸಮಾಧಿಯಾದರೆ, ಏಸು ಭೇಟಿಯಾಗುತ್ತಾನೆ. ಸ್ವರ್ಗಕ್ಕೆ ನೇರವಾಗಿ ಹೋಗುತ್ತಾರೆ ಎದು ಪಾದ್ರಿ ಹೇಳಿದ್ದ ಮಾತನ್ನು ನಂಬಿ, ಜೀವಂತ ಸಮಾಧಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಕೀನ್ಯಾದ ಕಿಲಿಫಿಯ ಕರಾವಳಿ ಕೌಂಟಿಯಲ್ಲಿ ನಡೆದಿದೆ. ಪಾದ್ರಿಗೆ ಸಂಬಂಧಿಸಿದ 800 ಎಕರೆ ಭೂಮಿಯಲ್ಲಿ ಇಲ್ಲಿಯವರೆಗೆ 200ಕ್ಕೂ ಹೆಚ್ಚಿನ ಶವಗಳು ಸಿಕ್ಕಿದ್ದು, 600 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದ್ರಿ ಮೆಕೆಂಜಿಯನ್ನು ವಶಕ್ಕೆ ಪಡೆಯಲಾಗಿದೆ.

ಪಾದ್ರಿ, 2019 ರಲ್ಲಿ ತನ್ನ ಚರ್ಚ್ ಮುಚ್ಚಿ ಅರಣ್ಯ ಪ್ರದೇಶದಲ್ಲಿನ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಆದರೆ, ಅಲ್ಲಿ ಈಗ ಶವಗಳು ಸಿಕುತ್ತಿವೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾದ್ರಿ, 2019ರಲ್ಲಿಯೇ ಚರ್ಚ್ ಮುಚ್ಚಿದ್ದೇನೆ. ನಾನು ಆತ್ಮಹತ್ಯೆಗೆ ಪ್ರೇರೇಪಿಸಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಹಿಂದೆ ಇಬ್ಬರು ಮಕ್ಕಳ ಸಾವಿಗೆ ಪಾದ್ರಿ ಪಾಲ್ ಮೆಕೆಂಜಿ ಕಾರಣರಾಗಿದ್ದರು . ಪೋಷಕರ ದೂರು ನೀಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಾಕ್ಷ್ಯಗಳಿಲ್ಲದ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು