ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಚೆನ್ನೈ ಸೋಲು ಅನುಭವಿಸಿದ್ದು, ಕೆಕೆಆರ್ ಭರ್ಜರಿ ಜಯ ಸಾಧಿಸಿದೆ.
ಆದರೆ, ಮೈದಾನವು ಸಂಪೂರ್ಣ ಭರ್ತಿಯಾಗಿತ್ತು. ಸಿಎಸ್ಕೆ ಅಭಿಮಾನಿಗಳು ಎಂಬುದಕ್ಕಿಂತ ಎಂಎಸ್ ಧೋನಿ (MS Dhoni) ಫ್ಯಾನ್ಸ್ ತುಂಬಿದ್ದರು. ಚೆಪಾಕ್ನಲ್ಲಿ ಇದು ಚೆನ್ನೈನ ಕೊನೆಯ ಲೀಗ್ ಪಂದ್ಯವಾಗಿದ್ದರಿಂದಾಗಿ ಧೋನಿ ಸೇರಿದಂತೆ ಎಲ್ಲ ಆಟಗಾರರು ಇಡೀ ಮೈದಾನ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಇದರ ನಡುವೆ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅವರು ಧೋನಿಯ ಆಟೋಗ್ರಾಫ್ಗೆ ಓಡೋಡಿ ಬಂದರು.
ಈ ಘಟನೆ ಕಂಡು ಇಡೀ ಕ್ರೀಡಾ ಜಗತ್ತೇ ಆಶ್ಚರ್ಯ ವ್ಯಕ್ತಪಡಿಸಿದೆ. ಕ್ರಿಕೆಟ್ ನ ಲೆಜೆಂಡರಿ ಸುನಿಲ್ ಗವಾಸ್ಕರ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ಆಟೋಗ್ರಾಫ್ ಕೇಳಿದರು. ಅದುಕೂಡ ಅವರು ಧರಿಸಿಕೊಂಡಿದ್ದ ಶರ್ಟ್ ಮೇಲೆ. ಇದಕ್ಕೆ ಒಪ್ಪಿದ ಧೋನಿ ಗವಾಸ್ಕರ್ ಅವರ ಶರ್ಟ್ ಮೇಲೆ ತನ್ನ ಹಸ್ತಾಕ್ಷರ ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೂಡ ಇದನ್ನು ಮೆಚ್ಚುತ್ತಿದ್ದಾರೆ.