Kornersite

Crime Just In National

ಮಹಾರಾಷ್ಟ್ರದಲ್ಲಿ ಕೋಮು ಗಲಭೆ; ಓರ್ವ ಸಾವು, 13 ಜನರ ಸ್ಥಿತಿ ಗಂಭೀರ!

ಮಹಾರಾಷ್ಟ್ರದ ಅಕೋಲ ಹಾಗೂ ಶೆವ್ಗಾಂವ್ ನಲ್ಲಿ 2 ದಿನಗಳಿಂದ ಕೋಮು ಗಲಭೆ ಉಂಟಾಗಿದ್ದು, ಈ ಕಿಚ್ಚು ಬೇರೆಡೆ ಹರಡದಂತೆ ತಡೆಯಲು ಮಹಾರಾಷ್ಟ್ರ ಪೊಲೀಸರು ಹೈರಾಣಾಗುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ 130 ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, 13 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ರಾಜ್ಯ ಸಚಿವ ಗಿರೀಶ್ ಮಹಾಜನ್ ಅಕೋಲಾದಲ್ಲಿನ ಗಲಭೆ ಕುರಿತು ಮಾತನಾಡಿದ್ದು, ಅಕೋಲಾದ ಗಲಭೆ ಪೂರ್ವಯೋಜಿತವಾಗಿದೆ ಎಂದು ಆರೋಪಿಸಿದ್ದರೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಕೆಲವು ಮಂದಿ ಹಾಗೂ ಸಂಘಟನೆಗಳು ರಾಜ್ಯ ಅಸ್ಥಿರದಲ್ಲಿರುವುದನ್ನು ಬಯಸುತ್ತಿದ್ದಾರೆ. ಆದರೆ ಸರ್ಕಾರ ಪಾಠ ಕಲಿಸಲಿದೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಪೋಸ್ಟ್ ಹಾಕಿದ್ದಕ್ಕೆ ಗಲಭೆ ಆರಂಭವಾಗಿದ್ದು, ಅದರ ಕಿಚ್ಚು ಇಷ್ಟೊಂದು ದೊಡ್ಡ ಮಟ್ಟದ ಗಲಾಟೆಗೆ ಕಾರಣವಾಗಿದೆ. ಈ ಗಲಭೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೂ ಗಾಯಗಳಾಗಿವೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ