ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, 9 ಜನ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಅಲ್ಲದೇ, ಘಟನೆಯಲ್ಲಿ ಹಲವು ಜನ ಗಾಯಗೊಂಡಿದ್ದಾರೆ. ಈ ಕುರಿತು ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ಆರಂಭಿಸಿದೆ.
ಇದ್ದಕ್ಕಿದ್ದಂತೆ ಭಾರಿ ಸ್ಫೋಟವೊಂದು ಕೇಳಿಬಂದಿತ್ತು, ಕಾರ್ಖಾನೆಯ ಮೇಲ್ಛಾವಣಿ ಹಾರಿಹೋಗಿರುವುದನ್ನು ನೋಡಿದ್ದಾರೆ. ಜನರ ಮೃತ ದೇಹಗಳು ಛಿದ್ರವಾಗಿ ಬಿದ್ದಿವೆ. ಕೆಲವರ ದೇಹಗಳು ರಸ್ತೆಯಲ್ಲಿ ಬಿದ್ದಿವೆ. ಅದರಲ್ಲಿ ಹಲವರು ಸುಟ್ಟು ಕರಕಲಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತರು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸರ ಪ್ರಕಾರ, ಸ್ಫೋಟ ಸಂಭವಿಸಿದ ಸ್ಥಳವು ಒಡಿಶಾದ ಗಡಿ ಪ್ರದೇಶದಲ್ಲಿದೆ ಎನ್ನಲಾಗಿದೆ.
ಸ್ಫೋಟದ ನಂತರ, ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಅದನ್ನು ನಂದಿಸಲು ಅಗ್ನಿಶಾಮಕ ದಳದ ವಾಹನವೂ ಸ್ಥಳಕ್ಕೆ ತಲುಪಿತು. ಸಮೀಪದ ಗುಡಿಸಲಿನಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಹತೋಟಿಗೆ ತರಲಾಗಿದೆ.