ಹಾರ್ಟ್ ಅಟ್ಯಾಕ್. ಈ ಪದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ವಯಸ್ಸಿನ ವ್ಯತ್ಯಾಸವಿಲದೇ, ಚಿಕ್ಕ ವಯಸ್ಸಿನವರಲ್ಲು ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗೆಯೇ ತೆಲಂಗಾಣದಲ್ಲಿ ಬಾಲಕನೊಬ್ಬ ತನ್ನ ಹುಟ್ಟುಹಬ್ಬದ ಕೇಕ್ ಕಟ್ ಮಾಡ್ತಾ ಇದ್ದ, ಅದೇ ಸಮಯಕ್ಕೆ ಹೇದಯಾಘಾತವಾಗಿ ಸಾವನ್ನಪ್ಪಿದ್ದಾನೆ.

Telangana: ಜನ್ಮದಿನದಂದೇ ಸಾವನ್ನಪ್ಪಿದ್ದು ಕೇವಲ 16 ವರ್ಷದ ಬಾಲಕ. ಬರ್ತ್ ಡೇ ದಿನವೇ ಆತನ ಡೇತ್ ಡೇ ಕೂಡ ಆಗಿ ಹೋಗಿದೆ. ತೆಲಂಗಾಣದ ಅಸಿಫಾಬಾದ್ ಮಂಡಲ್ ನ ಬಾಬಾಪುರ ಗ್ರಾಮದ ಸಚಿನ್ ಮೃತಪಟ್ಟ ಬಾಲಕ. ಈತನ ಹುಟ್ಟುಹಬ್ಬಕ್ಕೆ ಕುಟುಂಬದವರು, ಸ್ನೇಹಿತರು ಹಾಗೂ ಅಕ್ಕ್ಪಕ್ಕದ ಮನೆಯವರು ಜಮಾಯಿಸಿದ್ದರು. ಎಲ್ಲರೂ ಖುಷಿಯಾಗಿದ್ದರು. ಸಚಿನ್ ಪೋಷಕರು ಮಗನ ಬರ್ತಡೇ ಗ್ರ್ಯಾಂಡ್ ಆಗಿ ಮಾಡಬೇಕೆಂದು ಫಂಕ್ಷನ್ ಆಯೋಜಿಸಿದ್ದರು. ಸಂಭ್ರಮಾಚರಣೆ ನಡೆಯುವಾಗಲೇ ಸಚಿನ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಸಚಿನ್ ನ ಪ್ರಾಣಪಕ್ಷಿ ಹಾರಿಹೊಗಿದೆ ಎಂದು ಹೇಳಿದ್ದಾರೆ. ನೊಂದ ಕುಟುಂಬಸ್ಥರು ಕೇಕ್ ಕತ್ತರಿಸಿ ಮಗನಿಗೆ ಗೌರವ ಸಲ್ಲಿಸಿದ್ದಾರೆ.