ಪ್ರಧಾನಿ ನರೇಂದ್ರ ಮೋದಿ ಅವರು 3 ದಿನಗಳ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಇಂದು ವಿವಿಧ ಉದ್ಯಮಗಳ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಆಸ್ಟ್ರೇಲಿಯಾದ ಫಾರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್ ನ ಎಕ್ಸಿಕ್ಯೂಟಿವ್ ಅಧ್ಯಕ್ಷ ಆಂಡ್ರ್ಯೂ ಫಾರೆಸ್ಟ್, ಆಸ್ಟ್ರೇಲಿಯ್ಸೂಪರ್ ಕಂಪನಿಯ ಸಿಇಒ ಪೌಲ್ ಶ್ರೋಡರ್ ಸೇರಿದಂತೆ ಹಲವು ಉದ್ಯಮಿಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದು, ಎಲ್ಲರೂ ಮೋದಿ ಅವರ ವ್ಯಕ್ತಿತ್ವ ಮತ್ತು ವ್ಯವಹಾರಶೀಲತೆಗೆ ತಲೆದೂಗಿದ್ದಾರೆ.

ಪ್ರಧಾನಿ ಮೋದಿ ಭೇಟಿ ಮಾಡಿದ ಫ್ಯೂಚರ್ ಇಂಡಸ್ಟ್ರೀಸ್ ಎಕ್ಸಿಕ್ಯೂಟಿವ್ ಛೇರ್ಮನ್ ಆಂಡ್ರ್ಯೂ ಫಾರೆಸ್ಟ್ ಅವರು, ಭಾರತದ ಗ್ರೀನ್ ಹೈಡ್ರೋಜನ್ ಮಿಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳೊಂದಿಗೆ ತಮ್ಮ ಸಂಸ್ಥೆ ಕೆಲಸ ಮಾಡಲು ಇಚ್ಛಿಸುತ್ತಿರುವುದಾಗಿ ಅವರು ಪ್ರಧಾನಿ ಮೋದಿ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಮೋದಿ ಸ್ವಾಗತಿಸಿದ್ದಾರೆ.